ಜೈನರಲ್ಲಿ ದೀಪಾವಳಿಯನ್ನು ರಕ್ಷಾವಳಿ ಎಂದು ಕರೆಯುತ್ತಾರೆ. ಕಾರ್ತಿಕ ಬಹುಳ ಅಮಾವಾಸ್ಯೆಯ ಬೆಳಗಿನ ಜಾವ ಭಗವಾನ್ ಮಹಾವೀರ ಸ್ವಾಮಿ ಮೋಕ್ಷ ಹೊಂದಿದರು. ಆ ದಿನ ಬೆಳಗಿನ ಜಾವ ಕತ್ತಲೆಯಲ್ಲಿ ಸುರರಾಜ ದೇವೇಂದ್ರ ಮತ್ತು ದೇವತೆಗಳು ಕೈಯಲ್ಲಿ ದೀಪಗಳನ್ನು ಹಿಡಿದುಕೊಂಡು ಭೂಲೋಕದ ಮೋಕ್ಷ ಸ್ಥಳಕ್ಕೆ ಆಗಮಿಸಿದರು.ಮಹಾವೀರ ಸ್ವಾಮಿಯ ನಿರ್ವಾಣೋತ್ಸವದ ವಿಧಿ ವಿಧಾನ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಸ್ವರ್ಗಪರಿವಾರದವರೆಲ್ಲರ ಕೈಯಲ್ಲಿ ದೀಪಗಳ ಸಮೂಹ ಹೀಗೆ ಇಂದ್ರನು ದೀಪ ಬೆಳಗಿಸಿ ಉತ್ಸವ ಮಾಡಿದ್ದರಿಂದಲೇ ಇಂದಿಗೂ ದೀಪಾವಳಿ ಹಬ್ಬ ನಡೆಯುತ್ತಿದೆ.
ದೀಪಾವಳಿಯ ಸಂಬಂಧ ಅನೇಕ ಪ್ರಸಂಗ ಘಟನೆಗಳ ಉಲ್ಲೇಖ ಬೇರೆ ಬೇರೆ ಧಾರ್ಮಿಕ ಗ್ರಂಥಗಳಲ್ಲಿ ಸಿಗುತ್ತದೆ ಆದರೆ ಇವುಗಳಲ್ಲಿ ಇರುವ ಅತ್ಯಂತ ಪ್ರಾಚೀನ ಉಲ್ಲೇಖ ಎಂದರೆ ಭಗವಾನ್ ಶ್ರೀ ಮಹಾವೀರರ ನಿರ್ವಾಣ ಮತ್ತು ಶ್ರೀ ಗೌತಮ ಗಣಧರರ ಕೇವಲಜ್ಞಾನ ಈ ಪ್ರಸಂಗಗಳು ದೀಪಾವಳಿ ಪರ್ವ ಆರಂಭಕ್ಕೆ ಕಾರಣವಾದವು.
ತ್ರಯೋದಶಿ
ಭಾನುವಾರ 19/10/2025 ಅದು ಧನ ತ್ರಯೋದಶಿ ಅಲ್ಲ ಭಗವಾನ್ ಮಹಾವೀರರು ಸಮವಸರಣವನ್ನು ತ್ಯಾಗ ಮಾಡಿ ಪಾವಪುರಿಯ ಪದ್ಮಸರೋವರ ದಲ್ಲಿ ಯೋಗ ಧಾರಣೆ ಮಾಡಿದ ದಿನ ಅದು ಧ್ಯಾನ ತ್ರಯೋದಶಿ ಅಥವಾ ಧನ್ಯ ತ್ರಯೋದಶಿ
ಚತುರ್ದಶಿ
ಸೋಮವಾರ 20/10/2025 ಭಗವಾನ್ ಶ್ರೀ ಮಹಾವೀರರ ಯೋಗ ಮುಂದುವರಿದ ದಿನ
ಈ ಬಾರಿ ಜೈನ ಪದ್ಧತಿಯಂತೆ ಸೂರ್ಯೋದಯ ಸಮಯಕ್ಕೆ ಇರುವ ತಿಥಿ ಅನುಸಾರ ಮಂಗಳವಾರ 21/10/2025 ಅಮಾವಾಸ್ಯೆ ಭಗವಾನ್ ಶ್ರೀ ಮಹಾವೀರ ನಿರ್ವಾಣ ದಿನ.
ಈ ದಿನದಂದು ಎಲ್ಲಾ ಬಸದಿಗಳಲ್ಲಿ ಬೆಳ್ಳಂಬೆಳಗೆ (5.30am) ಅರ್ಘ್ಯ ಎತ್ತುವ ಕಾರ್ಯಕ್ರಮವಿರುತ್ತದೆ.ಉತ್ತರಭಾರತದಲ್ಲಿ “ಲಡ್ಡು ಚಡಾವೋ” ಕಾರ್ಯಕ್ರಮ ನಡೆಯುತ್ತದೆ. ಮಹಾವೀರರು ದೀಪಾವಳಿಯಂದೆ ನಿರ್ವಾಣ ಹೊಂದಿದರಾದರೂ ಸ್ವಾಮಿಯ ನಿರ್ವಾಣದಿಂದಲೇ ಆ ದಿನ ದೀಪಾವಳಿ ಆಚರಣೆಗೆ ಬಂತು ಎಂದು ತಿಳಿದು ಬರುತ್ತದೆ.
ಅಮಾವಾಸ್ಯೆಯ ಸಂಜೆ ಶ್ರೀ ಗೌತಮ ಗಣಧರರ ಕೇವಲಜ್ಞಾನ. ದೀಪಾವಳಿ ಪಾಡ್ಯ ಬುಧವಾರ 22/10/2025 ನೂತನ ಮಹಾವೀರ ಶಕೆ 2552 ರ ಆರಂಭ. ಪ್ರಚಲಿತ ಬೇರೆ ಬೇರೆ ಶಕೆಗಳಿಗಿಂತ ಪ್ರಾಚೀನ ಶಕೆ ಶ್ರೀ ಮಹಾವೀರ ನಿರ್ವಾಣ ಶಕೆ. ಭಗವಾನ್ ಮಹಾವೀರ ಮೋಕ್ಷಕಲ್ಯಾಣ ಮತ್ತು ಗೌತಮ ಗಣಧರರ ಕೇವಲ ಜ್ಞಾನದ ಪ್ರಾಪ್ತಿಯ ಕಾರಣವಾಗಿ ಪುರಜನರು ದೀಪವನ್ನು ಹಚ್ಚುವುದರ ಮೂಲಕ ಸಂಭ್ರಮ ಆಚರಿಸಿ ಅದು ದೀಪಗಳ ಹಾವಳಿಯ ತರಹ ಕಂಡಿದ್ದು ಈ ಎಲ್ಲ ಕಾರಣಗಳು ದೀಪಾವಳಿ ಆಚರಣೆ ಪ್ರಾರಂಭವಾಯಿತು.
ಮುಂದೆ ಮುಂದೆ ಈ ತಿಥಿಗಳೊಂದಿಗೆ ಬೇರೆ ಬೇರೆ ಪ್ರಸಂಗಗಳು ಜೊತೆಗೂಡಿ ನಿಜ ಕಾರಣ ಮರೆಯಾಗಿ ಬೇರೆ ಕಾರಣಗಳು ಲೋಕರೂಢಿಗೆ ಬಂದವು ಜೈನರು ಲೋಕರೂಢಿಯನ್ನೇ ಮೈಗೂಡಿಸಿಕೊಂಡರು.
ನಮ್ಮಲ್ಲಿ ಗೌತಮ ಗಣಧರರೇ ಗಣಪತಿ (ಎಲ್ಲ ಗಣಧರರು-ಗಣಪತಿಗಳು) ಮೋಕ್ಷವೇ ಲಕ್ಷ್ಮಿ ಕೇವಲ ಜ್ಞಾನವೇ ಲಕ್ಷ್ಮಿ ಹಾಗು ಸರಸ್ವತಿ.
ಪ್ರೊ ಅಕ್ಷಯ ಕುಮಾರ್, ಮಳಲಿ.