ಸುರತ್ಕಲ್: ಸುರತ್ಕಲ್‌ನ ಅಭಿಷ್ ಬಿಸಿನೆಸ್ ಸೆಂಟರ್‌ನಲ್ಲಿ ಕಾಂಚೀವರಂ, ರೇಷ್ಮೆ ಸೀರೆಗಳ ಸಹಿತ ಅದ್ದೂರಿ ಬ್ರ್ಯಾಂಡೆಡ್ ಸೀರೆಗಳ ಮಳಿಗೆ — “ಸಿರಿ ಎಕ್ಸ್‌ಕ್ಲೂಸಿವ್ ಸಾರಿ ಶಾಪ್” ರವಿವಾರ ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡುತ್ತಾ, —
“‘ಸಿರಿ’ ಎಂದರೆ ಸಂಪತ್ತು. ಉದ್ಯಮಿ ಸುಧಾಕರ ಪೂಜಾ ಅವರು ತಮ್ಮ ವ್ಯವಹಾರ ಜೀವನದೊಂದಿಗೆ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಎಲ್ಲರ ಮನಸ್ಸು ಗೆದ್ದಿದ್ದಾರೆ. ಈಗ ಅವರ ಪುತ್ರಿ ಸ್ಫೂರ್ತಿ ಅವರು ಹೊಸ ಉದ್ಯಮ ಪ್ರಾರಂಭಿಸಿದ್ದು ಸಂತಸದ ಸಂಗತಿ. ಗ್ರಾಹಕರಿಗೆ ಪ್ರಾಮಾಣಿಕ ಸೇವೆ ನೀಡುವ ಮೂಲಕ ಯಶಸ್ಸು ಸಾಧಿಸಲಿ,” ಎಂದು ಆಶೀರ್ವದಿಸಿದರು.
ಕಟೀಲು ಕ್ಷೇತ್ರದ ಕಮಲಾದೇವಿ ಆಸ್ರಣ್ಣ ಮಾತನಾಡಿ, “ಭಾರತೀಯ ಉಡುಗೆತೊಡುಗೆಯಲ್ಲಿ ಸೀರೆಗೆ ಅಪಾರ ಮಹತ್ವವಿದೆ. ಭಾರತೀಯ ಸೀರೆಯ ಸೊಗಸು ವಿದೇಶೀಯರಿಗೂ ಮೆಚ್ಚುಗೆಗೆ ಪಾತ್ರವಾಗಿದೆ. ‘ಸಿರಿ’ ಮಳಿಗೆ ಮೂಲಕ ಸಾಂಪ್ರದಾಯಿಕ ಮತ್ತು ನವೀನ ವಿನ್ಯಾಸಗಳ ಸೀರೆಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ” ಎಂದು ಆಶೀರ್ವಾದ ನೀಡಿದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ರೋಟರಿ ಸಂಸ್ಥೆಯ ದಿನೇಶ್ ಬಂಗೇರ, ಸುಭೋದ್ ಕುಮಾರ್, ಬಂಟರ ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಉದ್ಯಮಿ ಸುಧಾಕರ ಪೂಜಾ, ಅವರ ತಂದೆ ಸೀತಾರಾಮ ಪೂಜಾ, ತಾಯಿ ಸಂಪ ಪೂಜಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಈ ಮಳಿಗೆಯಲ್ಲಿ ಕಾಂಚೀವರಂ ರೇಷ್ಮೆ ಸೀರೆಗಳು, ಮೈಸೂರು ಸಿಲ್ಕ್, ಬಟೋಲಾ, ಫ್ಯಾನ್ಸಿ ಸಾರಿಗಳು, ಸೆಲ್ವಾರ್ ಹಾಗೂ ನವೀನ ವಿನ್ಯಾಸದ ಐಷಾರಾಮಿ ಸೀರೆಗಳ ವಿಶಾಲ ಸಂಗ್ರಹ ಲಭ್ಯವಿದೆ.