ಮಂಗಳೂರು: ಕೇರಳದಲ್ಲಿ ಮನೆ ಮಾತಾಗಿರುವ ʻಬಿಂದು ಜ್ಯುಲ್ಲರಿಯ ನಾಲ್ಕನೇ ಶೋರೂಂ ಮಂಗಳೂರಿನ ನಗರದ ಬೆಂದೂರ್ ಎಸ್‌ಸಿಎಸ್ ಆಸ್ಪತ್ರೆ ಸಮೀಪ ಭಾನುವಾರ ಶುಭಾರಂಭಗೊಂಡಿತು. ದಕ್ಷಿಣ ಭಾರತದ ಹೆಸರಾಂತ-ಬಹುಭಾಷಾ ನಟಿ ಸ್ನೇಹಾ ಪ್ರಸನ್ನ ಶೋರೂಂ ಉದ್ಘಾಟಿಸಿ ಶುಭ ಹಾರೈಸಿದರು.
ನಾನು ಮಂಗಳೂರಿಗೆ ಪ್ರಥಮ ಬಾರಿಗೆ ಆಗಮಿಸಿದ್ದು, ನಗರ ಸುಂದರವಾಗಿದೆ. ಇಲ್ಲಿ 40 ವರ್ಷಗಳ ಪರಂಪರೆಯ ಬಿಂದು ಜುವೆಲ್ಲರ್ಸ್ ಉದ್ಘಾಟಿಸಲು ಹೆಮ್ಮೆಪಡುತ್ತಿದ್ದೇನೆ. ಸ್ಥಾಪಕರ ಪರಿಶ್ರಮ, ಉತ್ತಮ ಗುಣಮಟ್ಟ ಮತ್ತು ಬದ್ಧತೆಯ ಸೇವೆಯಿಂದ ನಾಲ್ಕನೇ ಶೋರೂಮ್ ಉದ್ಘಾಟನೆಯಾಗಿದ್ದು, ಉದ್ಯಮ ಇನ್ನಷ್ಟು ಬೆಳೆಯಲಿ ಎಂದು ನಟಿ ಸ್ನೇಹಾ ಪ್ರಸನ್ನ ಶುಭ ಕೋರಿದರು.
ಬಿಂದು ಜ್ಯುವೆಲ್ಲರಿ ಮಾಲಕರಾಗಿರುವ ಅಭಿಲಾಷ್ ಕೆ.ವಿ., ಡಾ.ಅಜಿತೇಶ್ ತಮ್ಮ ಸಂಸ್ಥೆಯ ಯಶೋಗಾಥೆಯನ್ನು ವಿವರಿಸುತ್ತಾ, ನಾಲ್ಕು ದಶಕಗಳ ಹಿಂದೆ ದಿವಂಗತ ಕೆ.ವಿ.ಕುಂಕಣ್ಣನ್ ಅವರಿಂದ ಕಾಸರಗೋಡಿನಲ್ಲಿ ಬಿಂದು ಜುವೆಲ್ಲರಿ ಆರಂಭಗೊಂಡಿತು. ಅವರ ಮಕ್ಕಳಾದ ನಾವಿಬ್ಬರು ಮುನ್ನಡೆಸುತ್ತಿದ್ದೇವೆ. ಕಾಸರಗೋಡಿನಲ್ಲಿ ಎರಡು, ಸುಳ್ಯ ಮತ್ತು ಇದೀಗ ಮಂಗಳೂ ರಿನಲ್ಲಿ ಶೋರೂಮ್ ಆರಂಭಗೊಂಡಿದೆ. ಬೆಂದೂರ್‌ನ ಹೊಸ ಶೋರೂಮ್ ಗ್ರಾಹಕರಿಗೆ ಆಕರ್ಷಕ ಹಾಗೂ ಅದ್ಭುತ ಅನುಭವ ನೀಡುವಂತೆ ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಪ್ರತಿಯೊಂದು ಆಭರಣವೂ ಅದರ ಕೌಶಲ್ಯದ ಕಥೆಯನ್ನು ಸಾರುತ್ತದೆ. ಇಲ್ಲಿ ಗ್ರಾಹಕರು ಕೇವಲ ಖರೀದಿದಾರರಲ್ಲ, ಅವರೂ ಬಿಂದು ಕುಟುಂಬದ ಅವಿಭಾಜ್ಯ ಸದಸ್ಯರು. ಗ್ರಾಹಕ ಪ್ರೀತಿ ವಿಶ್ವಾಸವೇ ಈ ಬ್ಯಾಂಡ್‌ನ ಅತ್ಯಮೂಲ್ಯ ಸಂಪತ್ತು ಎಂದಿದ್ದಾರೆ.

ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದಜಿ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ -ವೈ., ಕರ್ನಾಟಕ ರಾಜ್ಯ ಅಲೈಡ್ ಆ್ಯಂಡ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಪ್ಟಿಕರ್ ಅಲಿ ಫರೀದ್, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಹ್ಮದ್ ಮುದಸ್ಸರ್ ಶುಭಹಾರೈಸಿದರು. ಬಿಂದು ಜುವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕರಾದ ಅಭಿಲಾಷ್ ಕೆ.ವಿ., ಡಾ. ಅಜಿತೇಶ್, ಅವರ ಮಾತೃಶ್ರೀ ಶೋಭನಾ, ಸಿನಿಮಾ ನಟರಾದ ಶೋಧನ್ ಶೆಟ್ಟಿ. ಅನೀಶ್ ಮತ್ತಿತರರು ಉಪಸ್ಥಿತರಿದ್ದರು.
ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ಭರಪೂರ ಕೊಡುಗೆಗಳು
– ಪ್ರತೀ ಆಭರಣ ಖರೀದಿಗೆ ಸರ್ಪೈಸ್ ಗಿಫ್ಟ್
-ಪ್ರತೀ ಕ್ಯಾರೆಟ್ ವಜ್ರದ ಮೇಲೆ 5000 ರೂ. ರಿಯಾಯಿತಿ.
-ಮೇಕಿಂಗ್ ಚಾರ್ಜಸ್ ಮೇಲೆ ಶೇ.30 ರಿಯಾಯಿತಿ
-ಅದೃಷ್ಟವಂತ ಗ್ರಾಹಕರಿಗೆ ಕಾರು ಬಂಪರ್ ಬಹುಮಾನ.