ಹೊನ್ನಾವರ: ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಮೃತ ಪಟ್ಟಿರುವ ಧಾರುಣ ಘಟನೆ ಭಾನುವಾರ(ಅ.19) ಹೊನ್ನಾವರ ತಾಲೂಕಿನ ಕಾಸರಗೋಡು ಬಳಿ ಸಂಭವಿಸಿದೆ.
ಸಂತೋಷ ಗಣಪು ಗೌಡ(50) ಮತ್ತು ಇವರ ಪತ್ನಿ ಸೀತು ಸಂತೋಷ್ ಗೌಡ( 42) ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟ ದಂಪತಿ.

ಕಾಸರಕೋಡು ಬಟ್ಟೆ ವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ನಿನ್ನೆ ತಡರಾತ್ರಿ ಕಟ್ಟಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಮನೆಯ ಅಂಗಳದ ಸಮೀಪದಲ್ಲೆ ಹೈಟೆನ್ಷನ್ ತಂತಿ ಬಿದ್ದಿದ್ದು, ಆಕಸ್ಮಿಕವಾಗಿ ಅದನ್ನು ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಿ ಕಾಸರಗೋಡಿನ ಗ್ರಾಮಸ್ಥರು ಸರ್ಕಾರಿ ಆಸ್ಪತ್ರೆಯ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಬ್ಬರ ಮೃತದೇಹಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ತರಲಾಗಿರುತ್ತದೆ. ಸಚಿವ ಮಂಕಾಳ ವೈದ್ಯ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದು, ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡಿದ್ದಾರೆ.