ಅ.19ರಂದು ಬೆಂದೂರಿನಲ್ಲಿ ಶುಭಾರಂಭಗೊಳ್ಳಲಿದೆ ʻಬಿಂದು ಜ್ಯುವೆಲ್ಲರಿʼಯ ನೂತನ ಶಾಖೆ

ಮಂಗಳೂರು: ನಂಬಿಕೆ, ಶುದ್ಧತೆ ಮತ್ತು ನಾವೀನ್ಯ ಕರಕುಶಲತೆಗೆ ಹೆಸರುವಾಸಿಯಾದ ಬಿಂದು ಜ್ಯುವೆಲ್ಲರಿಯ ನೂತನ ಶಾಖೆಯು ಅಕ್ಟೋಬರ್ 19ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಬೆಂದೂರಿನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಬಿಂದು ಜ್ಯುವೆಲ್ಲರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಭಿಲಾಷ್ ಕೆ.ವಿ. ತಿಳಿಸಿದರು.

ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿ, ಕಳೆದ ನಾಲ್ಕು ದಶಕಗಳ ಸಾಧನೆಯನ್ನು ಹೆಮ್ಮೆಯಿಂದ ಆಚರಿಸಿಕೊಂಡು ಬರುತ್ತಿರುವ ಈ ಸಂಸ್ಥೆಯು ಕರ್ನಾಟಕದಲ್ಲಿ ಎರಡನೇ ಮಳಿಗೆಯನ್ನು ತೆರೆಯುತ್ತಿರುವುದು ಸಂತಸವನ್ನು ತಂದಿದೆ. ಕಾಸರಗೋಡಿನಲ್ಲಿ 1981ರಲ್ಲಿ ಶುದ್ಧತೆ, ಶ್ರೇಷ್ಠತೆ ಮತ್ತು ನಂಬಿಕೆಯ ವಾಗ್ದಾನವನ್ನು ಹೊತ್ತ ಕನಸು ರೂಪುಗೊಂಡಿತು. ಆ ಕನಸೇ ಇಂದು “ಬಿಂದು ಜ್ಯುವೆಲ್ಲರಿ”ಯಾಗಿ ಅರಳಿ ನಿಂತಿದೆ. ಈ ಸಂಸ್ಥೆಯನ್ನು ಸ್ಥಾಪನೆ ಮಾಡುವಲ್ಲಿ ದಿವಂಗತ ಕೆ.ವಿ. ಕುಂಞಿಕಣ್ಣನ್ ಯಶಸ್ವಿಯಾಗಿದ್ದರು. ಅವರ ದೂರದೃಷ್ಟಿಯು ಈ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆದು ನಿಲ್ಲಲ್ಲು ಸಹಾಯ ಮಾಡಿದೆ. ಇಂದು ಪ್ರಖ್ಯಾತ ಬ್ರಾಂಡ್ ಆಗಿ ಸಂಸ್ಥೆಯು ಬೆಳೆದು ನಿಂತಿದೆ. ಕೇವಲ ಆಭರಣ ಬ್ರಾಂಡ್ ಆಗಿ ಮಾತ್ರ ಅಲ್ಲದೆ ಜೀವನದ ಖುಷಿ ಸಂದರ್ಭದಲ್ಲೂ ನಿಜವಾದ ಸಂಗಾತಿಯಾಗಿ ಹೆಜ್ಜೆ ಹಾಕುತ್ತಾ ಜನಮಾನಸದಲ್ಲಿ ನಿಂತಿದೆ ಎಂದರು.

 

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

ನಾಲ್ಕು ದಶಕಗಳಿಂದ, ಈ ವಾಗ್ದಾನವು ಅನೇಕ ತಲೆಮಾರಿನವರ ಜೀವನವನ್ನು ಅಲಂಕರಿಸಿದೆ, ಕನಸುಗಳನ್ನು ನೆನಪುಗಳಾಗಿ ರೂಪಿಸಿದೆ ಮತ್ತು ಅನೇಕರ ಹೃದಯಗಳಲ್ಲಿ ಶಾಶ್ವತ ವಾದ ಸ್ಥಾನವನ್ನು ಬಿಂದು ಆಭರಣ ಸಂಸ್ಥೆಯು ಪಡೆದಿತ್ತು ಮುಂದೆ ಆ ಭರವಸೆಯನ್ನು ಉಳಿಸಿಕೊಳ್ಳಲಿದೆ ಎಂದು ಅಭಿಲಾಷ್ ಕೆ.ವಿ. ತಿಳಿಸಿದರು .

ಗ್ರಾಹಕರನ್ನು ಸೆಳೆಯಲಿದೆ ಮೈ ಬ್ಲೂ ಡೈಮಂಡ್
ಬೆಂದೂರಿನಲ್ಲಿರುವ ಹೊಸ ಪ್ರಮುಖ ಶೋರೂಮ್ ಅದ್ಭುತ ಅನುಭವವನ್ನು ನಾವಿನ್ಯತೆಯನ್ನು ನೀಡಲಿದೆ ಎಂದರು. ಮುಂಬರುವ ಯೋಜನೆಗಳಲ್ಲಿ ಇಂದಿನ ಆಧುನಿಕ, ಶೈಲಿಯನ್ನು ಗುರಿಯಾಗಿಟ್ಟುಕೊಂಡು ಹಗುರವಾದ ಆಭರಣ ಬ್ರಾಂಡ್‌ನ ಬಿಡುಗಡೆ ಮತ್ತು ಅತ್ಯಾಧುನಿಕತೆಯ ಸಾರವನ್ನು ಹೊಂದಿರುವ ವಿಶೇಷ ಐಷಾರಾಮಿ ವಜ್ರದ ಸಾಲಿನ ಮೈ ಬ್ಲೂ ಡೈಮಂಡ್ ಗ್ರಾಹಕರನ್ನು ಸೆಳೆಯಲಿದೆ ಎಂದರು.

 

ಜಾಹೀರಾತು✨ ಬನ್ನಿ, SilverRoute Journeys ಜೊತೆ ಕನಸಿನ ಪ್ರಯಾಣ ಆರಂಭಿಸಿ! ✨ ✈️ ವಿಮಾನ | 🚆 ರೈಲು & ಬಸ್ | 🏨 ಹೋಟೆಲ್ | 🌴 ರಜಾ ಪ್ಯಾಕೇಜ್‌ಗಳು 📞 +918197945822 🌟━━━━━━━━━🌟

ಸ್ವರ್ಣ ಬಿಂದು, ಮುಂಗಡ ಬುಕಿಂಗ್
ಈ ಹೊಸ ಉದ್ಯಮಗಳೊಂದಿಗೆ, ಬಿಂದು ಜ್ಯುವೆಲ್ಲರಿ ದಕ್ಷಿಣ ಭಾರತದ ಪ್ರಮುಖ ಆಭರಣ ಬ್ರಾಂಡ್‌ಗಳಲ್ಲಿ ಒಂದಾಗಿ ಹೊರಹೊಮ್ಮವ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಸಂಸ್ಥೆಯು ಹೆಜ್ಜೆ ಹಾಕಲು ಹೊರಟಿದೆ. ಬಿಂದು ಜ್ಯುವೆಲ್ಲರಿ ತನ್ನ ಗ್ರಾಹಕರ ನಂಬಿಕೆಗೆ ಪ್ರತಿಫಲ ನೀಡುತ್ತಲೇ ಇದ್ದು ಅಕ್ಷಯನಿಧಿ ಮತ್ತು ಸ್ವರ್ಣ ಬಿಂದು ಮಾಸಿಕ ಉಳಿತಾಯ ಯೋಜನೆಗಳು ಗ್ರಾಹಕರಿಗೆ ಮಾಸಿಕ ಹೂಡಿಕೆ ಮಾಡಲು ಮತ್ತು ಆಕರ್ಷಕ ಬೋನಸ್‌ಗಳು ಮತ್ತು ಪ್ರಯೋಜನಗಳನ್ನು ಗಳಿಸಲು ಅನುವು ಮಾಡಿಕೊಡಲಿದೆ. ಇದು ಮುಂಗಡ ಬುಕಿಂಗ್ ಯೋಜನೆಯು ಮಾರುಕಟ್ಟೆಯ ಏರಿಳಿತಗಳ ಹೊರತಾಗಿಯೂ ಸ್ಥಿರ ದರದಲ್ಲಿ ಚಿನ್ನವನ್ನು ಪಡೆಯಲು ಅನುವು ಮಾಡಿಕೊಡಲಿದ್ದು ಭವಿಷ್ಯದ ದೃಷ್ಟಿ ಕೋನದಿಂದ ಈ ಯೋಜನೆಗಳು ಉಪಕಾರಿಯಾಗಲಿದೆ ಎಂದರು.

ಸ್ನೇಹಾ ಪ್ರಸನ್ನರಿಂದ ಉದ್ಘಾಟನೆ
ವಾಣಿಜ್ಯ ಯಶಸ್ಸಿನ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ಬಿಂದು ಜ್ಯುವೆಲ್ಲರಿ ನಿಂತಿರುವುದು ವಿಶೇಷ , ಯಾವಾಗಲೂ ಮಹಿಳಾ ಸಬಲೀಕರಣ, ಶಿಕ್ಷಣ ಮತ್ತು ಸಮುದಾಯ ಕಲ್ಯಾಣದ ಮೇಲೆ ಕೇಂದ್ರೀಕರಿಸುವ ತನ್ನ ಸ್ವರ್ಣ ಬಿಂದು ಸಿಎಸ್‌ಆರ್ ಉಪಕ್ರಮಗಳಿಂದ ಹೆಚ್ಚಿನ ಮನ್ನಣೆಯನ್ನು ಪಡೆದಿದೆ. ಬಿಂದು ಜ್ಯುವೆಲ್ಲರಿಯ ನೂತನ ಶಾಖೆಯ ಉದ್ಘಾಟನೆಯನ್ನು ದಕ್ಷಿಣ ಭಾರತದ ನಟಿ ಸ್ನೇಹಾ ಪ್ರಸನ್ನ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಸಂಸದರು , ವಿಧಾನಸಭೆಯ ಸದಸ್ಯರು ಮತ್ತು ಇನ್ನಿತ್ತರರು ಭಾಗವಹಿಸಲಿದ್ದಾರೆ. ಉದ್ಘಾಟನೆ ಸಮಾರಂಭದ ಜೊತೆಯಲ್ಲಿ ಮೈ ಬ್ಲೂ ಡೈಮಂಡ್ ಮತ್ತು ಸ್ವರ್ಣ ಬಿಂದು ಸಿಎಸ್ಆರ್ ಲೋಗೋಗಳ ಅನಾವರಣಗೊಳ್ಳಲಿದೆ ಎಂದು ಅಭಿಲಾಷ್ ಕೆ.ವಿ. ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ಪಾಲುದಾರರಾದ ಡಾ.ಅಜಿತೇಶ್ ಕೆ. ವಿ., ಸಂತೋಷ್, ಸುನಿಲ್ ರಾಜ್ ಉಪಸ್ಥಿತತರಿದ್ದರು.

error: Content is protected !!