ಮಂಗಳೂರು: ಸಾರ್ವಜನಿಕರ ಬಳಿ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಸುಮಾರು 1.5 ಕೋಟಿ ರೂ. ಹಾಗೂ ಚಿನ್ನವನ್ನು ಪಡೆದು ಹಲವರಿಗೆ ವಂಚಿಸಿದ ಪ್ರಕರಣ ಮುಲ್ಕಿ ತಾಲೂಕಿನ ಕಿನ್ನಿಗೋಳಿ ಪರಿಸರದಲ್ಲಿ ನಡೆದಿದೆ.
ಕವತ್ತಾರು ಗ್ರಾಮದ ರಿಚರ್ಡ್ ಡಿಸೋಜ (52) ಹಾಗೂ ಪತ್ನಿ ರಶ್ಮಿ ರೀಟಾ ಪಿಂಟೋ (47) ಬಂಧಿತ ಆರೋಪಿ.

ಕಳೆದ ವರ್ಷ ಈ ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿಗಳು ಪೊಲೀಸರಿಗೆ ಸಿಗದೆ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ದಂಪತಿಯ ಇರುವಿಕೆಯ ಬಗ್ಗೆ ಮಾಹಿತಿ ಪಡೆದ ಮುಲ್ಕಿ ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.