ಹಳೆಯಂಗಡಿ: ಪಡುಪಣಂಬೂರು ಬಸ್ ನಿಲ್ದಾಣದಲ್ಲಿ ಬಸ್ ಕಾಯುವ ಪ್ರಯಾಣಿಕರಿಗೆ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಅದೇನೆಂದರೆ ಬಸ್ ನಿಲ್ದಾಣದ ಮುಂಭಾಗದಲ್ಲೇ ಭಾರೀ ಗಾತ್ರದ ಫ್ಲೆಕ್ಸ್ ಅಡ್ಡಲಾಗಿ ಕಟ್ಟಿರುವುದು. ಇದರಿಂದ ಪ್ರಯಾಣಿಕರಿಗೆ ಬಸ್ ಬರುವುದು ಕಾಣಿಸದೆ ಕಿರಿಕಿರಿ ಉಂಟಾಗುತ್ತಿದೆ.
ಬಸ್ ನಿಲ್ದಾಣದ ಎರಡು ಬದಿಯಲ್ಲಿ ಫ್ಲೆಕ್ಸ್ ಬ್ಯಾನರ್ ಕಟ್ಟಲಾಗಿದ್ದು ಈ ಬಗ್ಗೆ ಸ್ಥಳೀಯ ಪಂಚಾಯತ್ ಗೆ ಮಾಹಿತಿ ಇದೆಯೇ ಎನ್ನುವುದು ತಿಳಿದಿಲ್ಲ. ಪ್ಲಾಸ್ಟಿಕ್ ಫ್ಲೆಕ್ಸ್, ಬ್ಯಾನರ್, ಪ್ಲಾಸ್ಟಿಕ್ ಬಳಕೆಗೆ ಹಲವಾರು ಕಡೆಗಳಲ್ಲಿ ನಿಷೇಧವಿದೆ. ಹೀಗಿದ್ದರೂ ಇಲ್ಲಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿ ಬ್ಯಾನರ್ ಹಾಕಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸಂಬಂಧಪಟ್ಟವರೇ ಉತ್ತರಿಸಬೇಕಿದೆ.
