ಬೆಂಗಳೂರು: ಪರಸ್ತ್ರೀಯರ ಜತೆ ಅಕ್ರಮ ಸಂಬಂಧ ಹೊಂದಿ, ತನ್ನನ್ನು ಮತ್ತು ಮಕ್ಕಳನ್ನು ಕಡೆಗಣಿಸುತ್ತಿದ್ದಾರೆ ಎಂದು ಪತ್ನಿಯೇ ಕಾಂಗ್ರೆಸ್ ಮುಖಂಡನ ಆತನ ವಿರುದ್ಧ ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹಲಸೂರಿನ ಕಾಂಗ್ರೆಸ್ ಮುಖಂಡ ಬಿ.ನಾರಾಯಣ್ ವಿರುದ್ಧ ಪೂರ್ವ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿಗೆ ನೋಟಿಸ್ ನೀಡಿದ್ದಾರೆ.
ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತನಾಗಿರುವ ನಾರಾಯಣ್‌ಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಹಲಸೂರಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದರು.
ಕಳೆದ ವರ್ಷ ಪತಿಯ ಅಕ್ರಮ ಸಂಬಂಧದ ಬಗ್ಗೆಯೂ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ನಾರಾಯಣ್‌ಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಈ ಮಧ್ಯೆ ಒಂದು ತಿಂಗಳ ಹಿಂದೆ ಮತ್ತೆ ದಂಪತಿ ನಡುವೆ ಗಲಾಟೆಯಾಗಿದ್ದು, ಈ ನಡುವೆ ಠಾಣೆಗೆ ದೂರು ನೀಡುವುದಾಗಿ ಪತಿ ನಾರಾಯಣ್‌ಗೆ ಹೇಳಿದಾಗ, ಆತ ತನಗೆ ಸಿಎಂ, ಡಿಸಿಎಂ ಪರಿಚಯವಿದ್ದಾರೆ. ನೀನು ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿದ್ದಾರೆ.