ಅ.18, 19, 20ರಂದು ಅಶ್-ಅರಿ ಸನದುದಾನ ಅದ್ಧೂರಿ ಮಹಾ ಸಮ್ಮೇಳನ

ಮಂಗಳೂರು: ದಕ್ಷಿಣ ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ದಾರುಲ್ ಅಶ್-ಅರಿಯ ಎಜುಕೇಷನಲ್ ಸೆಂಟರ್ ಸುರಿಬೈಲ್, ಬಂಟ್ವಾಳ ಇದರ ಶಿಲ್ಪಿ ಮರ್ಹೂಮ್ ಶೈಖುನಾ ಸುರಿಬೈಲ್ ಉಸ್ತಾದ್ ಅವರ 24ನೇ ಆಂಡ್ ನೇರ್ಚೆ ಹಾಗೂ ಅಶ್-ಅರಿ ಸನದುದಾನ ಮಹಾ ಸಮ್ಮೇಳನ ಅಕ್ಟೋಬರ್ 18, 19, 20 ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಕೆ. ಮೊನುದ್ದೀನ್ ಕಾಮಿಲ್ ಸಖಾಫಿ ಹೇಳಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸನದುದಾನ ಪ್ರಭಾಷಣಕ್ಕೆ ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

ಅಕ್ಟೋಬರ್ 18 ಶನಿವಾರ ಬೆಳಗ್ಗೆ 9.30ಕ್ಕೆ ಸಂಸ್ಥೆಯ ಕಾರ್ಯಾಧ್ಯಕ್ಷ ಬಹು. ಅಬೂಬಕ್ಕರ್ ಮುಸ್ಲಿಯಾರ್ ಬೊಳ್ಳಾರ್ ಅವರ ನೇತೃತ್ವದಲ್ಲಿ ಝಿಯಾರತ್ ಮತ್ತು ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಸ್ವಾಗತ ಸಮಿತಿ ಅಧ್ಯಕ್ಷ ಸುಲೈಮಾನ್ ಹಾಜಿ ಸಿಂಗಾರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಬ್ದುಲ್ ರವೂಫ್ (ಮಾಲಕರು, ಸುಲ್ತಾನ್ ಗೋಲ್ಡ್, ಮಂಗಳೂರು) ವಿಶೇಷ ಅತಿಥಿಯಾಗಿ ತಾಜುಲ್ ಉಲಮಾ ಆಡಿಟೋರಿಯಂ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ನಡೆಯುವ ಮಹಿಳಾ ತರಬೇತಿಯಲ್ಲಿ ಅನಸ್ ಅಮಾನಿ ಪುಷ್ಪಗಿರಿ ವಿಷಯ ಮಂಡನೆ ಮಾಡಲಿದ್ದಾರೆ ಎಂದು ಕೆ.ಕೆ. ಮೊನುದ್ದೀನ್ ಕಾಮಿಲ್ ಸಖಾಫಿ ನುಡಿದರು.

ಅಕ್ಟೋಬರ್ 19 ಭಾನುವಾರ ಬೆಳಗ್ಗೆ 10 ಗಂಟೆಗೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಾಗೂ ಜನಪ್ರಿಯ ಆಸ್ಪತ್ರೆ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಸೌಹಾರ್ದ ಸಮಾರಂಭ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಉಲಮಾ ಸಂಗಮವನ್ನು ಜಾಮಿಯಾ ಸಅದಿಯ ಪ್ರೊಫೆಸರ್ ಸ್ವಾಲಿಹ್ ಉಸ್ತಾದ್ ನೇತೃತ್ವದಲ್ಲಿ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಬೋಳಂತೂರಿನಿಂದ ಅಶ್-ಅರಿಯದವರೆಗೆ ಸಂದಲ್ ರ್ಯಾಲಿ ನಡೆಯಲಿದೆ. ಮಗ್ರಿಬ್ ನಮಾಜಿನ ಬಳಿಕ ಬಹು. ಸ್ವಾಲಿಹ್ ಉಸ್ತಾದ್ ನೇತೃತ್ವದಲ್ಲಿ ಜಲಾಲಿಯ ರಾತೀಬ್ ಹಾಗೂ ಯುವಾಗ್ನಿ ಆತಾವುಲ್ಲಾ ಹಿಮಮಿ ಕುಪ್ಪೆಟ್ಟಿ ಅವರ ಪ್ರಭಾಷಣ ನಡೆಯಲಿದೆ ಎಂದರು.

ಅಕ್ಟೋಬರ್ 20 ಸೋಮವಾರ ಸಂಜೆ 4 ಗಂಟೆಗೆ ಖಾಝಿ ಝನುಲ್ ಉಲಮಾ ಮಾಣಿ ಉಸ್ತಾದ್ ನೇತೃತ್ವದಲ್ಲಿ ಸ್ಥಾನ ವಸ್ತ್ರ ವಿತರಣೆ ನಡೆಯಲಿದೆ. ಮಗ್ರಿಬ್ ನಮಾಜಿನ ಬಳಿಕ ಸಂಸ್ಥೆಯ ಅಧ್ಯಕ್ಷ ವಾಲೆಮುಂಡೋವ್ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಸ್ಥೆಯ ಜನರಲ್ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ ಸ್ವಾಗತಿಸಲಿದ್ದಾರೆ. ಸನದುದಾನ ಹಾಗೂ ಸನದುದಾನ ಪ್ರಭಾಷಣಕ್ಕೆ ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ನೇತೃತ್ವ ವಹಿಸಲಿದ್ದು, ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಕೆ.ಕೆ. ಮೊನುದ್ದೀನ್ ಕಾಮಿಲ್ ಸಖಾಫಿ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಅಲಿ ಸಖಾಫಿ, ಅಮರುದ್ದೀನ್ ಕಾಟಿಪಳ್ಳ, ಸಿದ್ದಿಕ್ ಸಖಾಫಿ ಅಲಿ ಅಶ್-ಅರಿ, ಮುಸ್ತಫಾ ಅಶ್-ಅರಿ, ಥುಸಾನಾ ಅಬ್ದುಲ್ ಖಾದರ್, ಮಿಸ್ಬಾ ಅಲಿ ಹಿಕಾಮಿ ಉಪಸ್ಥಿತರಿದ್ದರು.

error: Content is protected !!