ಅ.19: ಯಕ್ಷ ಮಿತ್ರರು ಸುರತ್ಕಲ್ ಇದರ 20 ನೇ ವರ್ಷದ ವಾರ್ಷಿಕೋತ್ಸವ

ಸುರತ್ಕಲ್: ಯಕ್ಷಮಿತ್ರರು ಸುರತ್ಕಲ್ ಇದರ 20 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಅಕ್ಟೋಬರ್ 19 ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ “ಭೀಮಾಂಜನೇಯ ವಾಲಿ ಮೋಕ್ಷ” ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

ಮುಮ್ಮೇಳದಲ್ಲಿ ದೇವಿಪ್ರಸಾದ್ ಆಳ್ವ ತಲಪಾಡಿ, ಕಾವ್ಯಶ್ರೀ ಅಜೇರು, ದಯಾನಂದ ಶೆಟ್ಟಿಗಾರ್ ಮಿಜಾರು, ಮಯೂರ ನಾಯ್ಗ ಮಾಡೂರು, ಸುರೇಶ್ ಕಾಮತ್. ಹಿಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬಾರ್ ಸಮೋ ಸಂಪಾಜೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸದಾಶಿವ ಆಳ್ವ ತಲಪಾಡಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ. ಸಂಯೋಜನೆ : ವಾಸುದೇವ ಆಚಾರ್ಯ ಕುಳಾಯಿ.

ಸಭಾ ಕಾರ್ಯಕ್ರಮದಲ್ಲಿ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಐ ರಮಾನಂದ ಭಟ್ ಆಶೀರ್ವಚನ ಮಾಡಲಿದ್ದಾರೆ. ಯಕ್ಷ ಮಿತ್ರರು ಸುರತ್ಕಲ್ ಇದರ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿರಾಜೆಪೇಟೆ ಡಿವೈಎಸ್ ಪಿ ಎಸ್ ಮಹೇಶ್ ಕುಮಾರ್, ಸುರತ್ಕಲ್ ಅಗರಿ ಎಂಟರ್ ಪ್ರೈಸಸ್ ನ ಮಾಲಕ ಅಗರಿ ರಾಘವೇಂದ್ರ ರಾವ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ, ಮುಂಬೈ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್, ಕಲಾಪೋಷಕ ಪ್ರೇಮ್ ಶೆಟ್ಟಿ ಮುಂಬೈ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಕಟೀಲು ಮೇಳದ ಹಿರಿಯ ಯ್ಷಗಾನ ಕಲಾವಿದ ವಿಠಲ ಶೆಟ್ಟಿ ಸರಪಾಡಿ ಅವರನ್ನು ಸನ್ಮಾನಿಸಲಾಗುವುದು. ಸಂಸ್ಥೆಯ ಅಧ್ಯಕ್ಷ ಕೆ ರಾಜೇಶ್ ಕುಮಾರ್, ಕಾರ್ಯದರ್ಶಿ ನಾಗರಾಜ ಕಡಂಬೋಡಿ, ಕೋಶಾಧಿಕಾರಿ ಜಗದೀಪ್ ಶೆಟ್ಟಿ ಉಪಸ್ಥಿತರಿರುವರು.

error: Content is protected !!