ಮಂಗಳೂರು: ಶತಾಬ್ದ ವರ್ಷದ ಸಂಭ್ರಮದಲ್ಲಿರುವ ದೇಶಭಕ್ತ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಸವಾರಿ ಮಾಡಲು ಹೊರಟಿರುವುದು ಕಾನೂನು ದುರ್ಬಳಕೆಯ ಷಡ್ಯಂತ್ರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.
ರಾಷ್ಟ್ರಭಕ್ತ ವ್ಯಕ್ತಿ ನಿರ್ಮಾಣ ಕಾರ್ಯ ನಡೆಸುತ್ತಿರುವ ಸಂಘವು ದೇಶದ ಸಮಗ್ರತೆಗೆ, ಸುರಕ್ಷತೆಗೆ ಧಕ್ಕೆ ಬಂದ ಸಂದರ್ಭದಲ್ಲಿ ದೇಶದ ಹಿತಕ್ಕಾಗಿ ಕಾರ್ಯ ನಿರ್ವಹಿಸಿದೆ. ಇಂತಹ ಸಂಘಟನೆಯ ಮೇಲೆ ಪ್ರಿಯಾಂಕ ರಂತಹ ಸಂಕುಚಿತ ಮನಃಸ್ಥಿತಿಯವರು ಆರೋಪಿಸುತ್ತಿರುವುದು, ಅವರ ತಾಳಕ್ಕೆ ತಕ್ಕಂತೆ ಕುಣಿಯಲು ಹೊರಟಿರುವ ಸಿದ್ದರಾಮಯ್ಯ ತನ್ನ ಬುದ್ಧಿಯನ್ನೇ ಕಳೆದುಕೊಂಡಿರುವಂತೆ ವರ್ತಿಸುತ್ತಿದ್ದಾರೆ ಎಂದರು.
ಸಂಘದ ಪಥ ಸಂಚಲನಕ್ಕೆ ಕ್ರಮ ಕೈಗೊಳ್ಳಲು ಹೊರಟಿರುವ ಕಾಂಗ್ರೆಸ್ ಸರಕಾರ, ಸಂಘವು ಭಾರತ, ಚೀನ ಯುದ್ಧ ಸಮಯದಲ್ಲಿ ದೇಶದ ಸೈನಿಕರಿಗೆ ಬೆಂಗಾವಲಾಗಿ ಕೆಲಸ ಮಾಡಿರುವ ಕಾರ್ಯಕ್ಕೆ ನೆಹರೂ ಅವರು ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಥ ಸಂಚಲನಕ್ಕೆ ಅವಕಾಶ ನೀಡಿರುವುದನ್ನು ಮರೆತು ಹೋಗಿರುವುದು ಅಲ್ಪ ಸಂಖ್ಯಾಕರ ಓಲೈಕೆಗಾಗಿ ಆಗಿದೆ ಎಂದವರು ತಿಳಿಸಿದ್ದಾರೆ.