ಕಾರು ಢಿಕ್ಕಿ ಹೊಡೆದು ಬೈಕ್‌ ಸವಾರನಿಗೆ ಗಂಭೀರ ಗಾಯ

ಕಾಪು: ಮದುವೆಯ ಆಮಂತ್ರಣ ಪತ್ರವನ್ನು ವಿತರಿಸಲು ತೆರಳುತ್ತಿದ್ದ ಬೈಕ್‌ ಸವಾರನಿಗೆ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕೊಪ್ಪಲಂಗಡಿಯಲ್ಲಿ ಭಾನುವಾರ(ಅ.12) ಸಂಭವಿಸಿದೆ.

ಕಾರ್ಕಳ ತಾಲೂಕು ಕಣಜಾರು ನಿವಾಸಿ ಮೋಹಿತ್‌ ಪಿ.ಎಸ್‌. (35) ಗಾಯಾಳು ಯುವಕ.

ಬೆಂಗಳೂರಿನ ಖಾಸಗಿ ಕಂಪೆನಿ ಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಮೋಹಿತ್‌ ವರ್ಕ್‌ಫ್ರಂ ಹೋಂ ಮಾಡುತ್ತಿದ್ದರು. ಭಾನುವಾರ ತನ್ನ ಬೈಕಿನಲ್ಲಿ ಮದುವೆ ಆಮಂತ್ರಣ ಪತ್ರಿಕೆ ವಿತರಿಸಲೆಂದು ತೆರಳಿದ್ದಾಗ ಅಪಘಾತ ಸಂಭವಿಸಿದೆ.

error: Content is protected !!