ಮಾರ್ಚ್ 1ರಂದು ಲಯನ್ಸ್ ‘ಗ್ರಂಥ’ ಪ್ರಾಂತೀಯ ಸಮ್ಮಿಲನ; ಸಮಾಜಸೇವೆಯೇ ಸಮ್ಮೇಳನದ ಮುಖ್ಯ ಗುರಿ‌ ಎಂದ ಚರಣ್‌ ಆಳ್ವಾ

ಮಂಗಳೂರು: ಸಂಘಟನೆ ಅಂದರೆ ಬರೀ ಹಾರ-ತುರಾಯಿಗಳ ಹಂಗಾಮಲ್ಲ, ಅದು ಹಸಿದವರಿಗೆ ಅನ್ನ, ಅಶಕ್ತರಿಗೆ ಆಸರೆ ಎಂಬುದನ್ನು ಪ್ರಾಂತ್ಯ-2ರ ಲಯನ್ಸ್ ಸದಸ್ಯರು ಮತ್ತೊಮ್ಮೆ ಸಾಬೀತುಪಡಿಸಲು ಹೊರಟಿದ್ದಾರೆ. ಲಯನ್ಸ್ ಜಿಲ್ಲೆ 317-ಡಿಯ ಪ್ರಾಂತ್ಯ-೨ರ ಮಹತ್ವಾಕಾಂಕ್ಷೆಯ “ಗ್ರಂಥ” ಪ್ರಾದೇಶಿಕ ಸಮ್ಮಿಲನಕ್ಕೆ ಈಗ ಮುಹೂರ್ತ ನಿಗದಿಯಾಗಿದೆ.

ಮಂಗಳೂರಿನ ಪತ್ರಿಕಾ ಭವನದಲ್ಲಿ ಮಾತನಾಡಿದ ಪ್ರಾಂತ್ಯಾಧ್ಯಕ್ಷ ಚರಣ್ ಆಳ್ವ, ಈ ಬಾರಿ ಪಿಲಿಕುಳದ ಸ್ಕೌಟ್ಸ್ ಭವನದಲ್ಲಿ ನಡೆಯಲಿರುವ ಸಮಾವೇಶವು ಬರೀ ಭಾಷಣಗಳಿಗೆ ಸೀಮಿತವಾಗದೆ, ಅರ್ಥಪೂರ್ಣ ಸೇವಾ ಯೋಜನೆಗಳ ಮೂಲಕ ಹೊಸ ಇತಿಹಾಸ ಬರೆಯಲಿದೆ ಎಂದು ನುಡಿದಿದ್ದಾರೆ.

ಮಾರ್ಚ್ 1ರಂದು ಸಂಜೆ 4 ಗಂಟೆಗೆ ಸರಿಯಾಗಿ ಸ್ಕೌಟ್ಸ್ ಭವನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಇದನ್ನು ಪ್ರಾಂತ್ಯದ ಪ್ರಥಮ ಮಹಿಳೆ ಪ್ರಜ್ಞಾ ಚರಣ್ ಆಳ್ವ ಅವರು ಉದ್ಘಾಟಿಸಲಿದ್ದಾರೆ. ಖ್ಯಾತ ವಾಗ್ಮಿ ದಾಮೋದರ್ ಶರ್ಮಾ ಅವರ ಕಡೆಯಿಂದ ಕೇಳಿಬರಲಿರುವ ಮಾರ್ಗದರ್ಶನ ನುಡಿಗಳನ್ನಾಡಲಿದ್ದಾರೆ.. ಅಧ್ಯಾತ್ಮದ ಕಂಪನ್ನು ಹರಡಲು ಕದ್ರಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಕೃಷ್ಣ ಅಡಿಗ ಅವರು ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ ಎಂದು ಚರಣ್‌ ಆಳ್ವಾ ನುಡಿದರು.

ಬರೀ ಮಾತಲ್ಲ, ಕೃತಿಯಲ್ಲಿ ಸೇವೆ:
ಚರಣ್ ಆಳ್ವ ಅವರ ಪಡೆ ಈ ಬಾರಿ ಎರಡು ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದೆ. ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭವ್ಯ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗಿದ್ದು, ಇದರ ಲೋಕಾರ್ಪಣೆಯನ್ನು ಅಂದೇ ಬೆಳಗ್ಗೆ ದೇವಸ್ಥಾನದ ಆಡಳಿತ ಧರ್ಮದರ್ಶಿ ಡಾ. ಎ.ಜೆ. ಶೆಟ್ಟಿ ನೆರವೇರಿಸಲಿದ್ದಾರೆ. ಇದರ ಜೊತೆಗೆ, ಸೇವಾ ಭಾರತಿಯ ಮಾಧವವನ ಆವರಣದಲ್ಲಿರುವ ವಿಶೇಷ ಅಗತ್ಯವಿರುವ ಮಕ್ಕಳ ಮುಖದಲ್ಲಿ ನಗು ಮೂಡಿಸಲು ವಿಶೇಷ ಆಟೋಪಕರಣಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಜಿಲ್ಲಾ ರಾಜ್ಯಪಾಲರಾದ ಕುಡ್ಲಿ ಅರವಿಂದ್ ಶೆಣೈ ಅವರ ಮಾರ್ಗದರ್ಶನದಲ್ಲಿ, ಸಮ್ಮೇಳನ ಅಧ್ಯಕ್ಷ ಲೋಕೇಶ್ ಉಲ್ಲಾಳ್, ಕಾರ್ಯದರ್ಶಿ ಮನೋಜ್ ಶೆಟ್ಟಿ ಮತ್ತು ಕೋಶಾಧಿಕಾರಿ ಕುಸುಮಾ ಯು. ರಾವ್ ನೇತೃತ್ವದ ತಂಡ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಿದೆ. ಸಾಧಕರಿಗೆ ಗೌರವ ಸಮರ್ಪಣೆ, ಸಾಂಸ್ಕೃತಿಕ ವೈವಿಧ್ಯಗಳ ನಡುವೆ ಸಂಘಟನೆಯ ಶಕ್ತಿ ಪ್ರದರ್ಶನಕ್ಕೆ ಮಂಗಳೂರು ಸಾಕ್ಷಿಯಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರದ ಅಧ್ಯಕ್ಷರಾದ ಪ್ರಶಾಂತ್ ಬಿ. ಶೆಟ್ಟಿ, ವಲಯಾಧ್ಯಕ್ಷ ನರೇಶ್ ಕುಮಾರ್ ಶೆಟ್ಟಿ, ಸುನಿಲ್ ಕುಮಾರ್, ಪ್ರಾಂತ್ಯ ಕೋಶಾಧಿಕಾರಿ ಕುಸುಮಾ ಯು. ರಾವ್ ಹಾಗೂ ಸಮ್ಮೇಳನದ ಅಧ್ಯಕ್ಷರಾದ ಲೋಕೇಶ್ ಉಳ್ಳಾಲ್ ಅವರು ಉಪಸ್ಥಿತರಿದ್ದರು.

error: Content is protected !!