ಚಿಕ್ಕಮಗಳೂರು: ತವರುಮನೆ ಸೇರಿದ್ದಕ್ಕೆ ಆಕ್ರೋಶಗೊಂಡು ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವುದು ಘಟನೆ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ನೇತ್ರಾ (32) ಪತಿಯಿಂದ ಕೊಲೆಯಾದ ಮಹಿಳೆ.
ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದ ನೇತ್ರಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಪತಿಯ ಜತೆ ಜಗಳವಾಡಿಕೊಂಡು ಕಳೆದ ಮೂರು ತಿಂಗಳ ಹಿಂದೆ ಗಂಡನ ಮನೆ ತೊರೆದು ತವರುಮನೆ ಸೇರಿಕೊಂಡಿದ್ದಳು. ನೇತ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಐದು ತಿಂಗಳು ಕಳೆದಿದ್ದು, ಜಗಳ ಮಾಡಿಕೊಂಡು ತವರುಮನೆ ಸೇರಿದ್ದಕ್ಕೆ ಆಕ್ರೋಶಗೊಂಡು ಪತಿ ಚಾಕು ಇರಿದಿದ್ದಾನೆಂದು ಹೇಳಲಾಗುತ್ತಿದೆ.