ಸುಳ್ಯ: ನಗರದ ನಾಗಪಟ್ಟಣ ಎಂಬಲ್ಲಿ ದೋಸ್ತ್ ವಾಹನ ಹಾಗೂ ಬುಲೆಟ್ ಬೈಕ್ ನಡುವಿನ ಅಪಘಾತದಲ್ಲಿ ಬುಲೆಟ್ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಕೇರಳ ಕಲ್ಲಪಳ್ಳಿಯ ಮೂಲೆಹಿತ್ಲು ನಿವಾಸಿ ಕೃಷಿಕರಾಗಿದ್ದ ಪ್ರದೀಪ್ (40) ಮೃತರು.
ಸುಳ್ಯದಿಂದ ಕಲ್ಲಪಳ್ಲಿ ಕಡೆಗೆ ಹೋಗುತ್ತಿದ್ದ ಬುಲೆಟ್ ಬೈಕ್ ಹಾಗೂ ಸುಳ್ಯ ಕಡೆಗೆ ಬರುತ್ತಿದ್ದ ದೋಸ್ತ್ ವಾಹನದ ನಡುವೆ ಸುಳ್ಯ-ಆಲೆಟ್ಟಿ ರಸ್ತೆಯ ನಾಗಪಟ್ಟಣ ಸೇತುವೆ ಬಳಿ ಮುಖಾಮುಖಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಬುಲೆಟ್ ಸವಾರ ಪ್ರದೀಪ್ ಅವರನ್ನು ಸುಳ್ಯದ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲಾದರೂ ಅದಾಗಲೇ ಗಾಯಳು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಸುಳ್ಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.