ಬೆಂಗಳೂರು: ಸೌಂದರ್ಯ ಚರ್ಚೆಯಲ್ಲಿ ಜೆಲ್ ನೇಲ್ ಪಾಲಿಷ್ ಈಗ ಟ್ರೆಂಡ್ ಆಗಿದೆ. ಆದರೆ, ವೈದ್ಯಕೀಯ ತಜ್ಞರು ಇದರ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಸಂಶೋಧನೆಗಳ ಪ್ರಕಾರ, ಜೆಲ್ ಪಾಲಿಷ್ನಲ್ಲಿರುವ ರಾಸಾಯನಿಕಗಳು ಮತ್ತು ಅದನ್ನು ಗಟ್ಟಿಗೊಳಿಸಲು ಬಳಸುವ ಯುವಿ ಬೆಳಕು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.
ಜೆಲ್ ಪಾಲಿಷ್ನಲ್ಲಿ ಟ್ರೈಮೀಥೈಲ್‌ಬೆನ್ಝಾಯ್ಲ್ಡಿಫೆನೈಲ್‌ಫಾಸ್ಫೈನ್ ಆಕ್ಸೈಡ್ (TPO) ನಂತಹ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಯುರೋಪಿಯನ್ ಯೂನಿಯನ್ ಸಂಶೋಧನೆಯ ಪ್ರಕಾರ, ಈ ರಾಸಾಯನಿಕಗಳ ದೀರ್ಘಕಾಲಿಕ ಬಳಕೆ ಚರ್ಮದ ಅಲರ್ಜಿ, ಉರಿಯೂತ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಜೆಲ್ ಪಾಲಿಷ್ ಗಟ್ಟಿಗೊಳಿಸಲು ಬಳಸುವ ಯುವಿ ಬೆಳಕಿನ ಕಿರಣಗಳು ಚರ್ಮದ ಕ್ಯಾನ್ಸರ್ ಅಪಾಯವನ್ನು ಉಂಟುಮಾಡುವುದಾಗಿಯೂ ತಜ್ಞರು ಹೇಳುತ್ತಾರೆ.
ವಿಶೇಷವಾಗಿ ಗರ್ಭಿಣಿಯರು ಮತ್ತು ಚರ್ಮ ಸೂಕ್ಷ್ಮತೆ ಇರುವವರು ಹೆಚ್ಚು ಜಾಗರೂಕರಾಗಿರಬೇಕೆಂದು ವೈದ್ಯರು ಸೂಚಿಸುತ್ತಾರೆ. ಸುಂದರವಾದ ಉಗುರುಗಳಿಗಾಗಿ ಆರೋಗ್ಯದ ವಿಚಾರವಾಗಿ ರಾಜಿ ಮಾಡಿಕೊಳ್ಳಬೇಡಿ, ಸದಾ ಎಚ್ಚರಿಕೆಯಿಂದ ಮತ್ತು ಸುರಕ್ಷಿತ ಮಾರ್ಗವನ್ನು ಅನುಸರಿಸಿ ಎಂಬುದು ತಜ್ಞರ ಸಲಹೆ.