ರಾಮನಗರ: ಹಾರೋಹಳ್ಳಿಯಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಸೆಕ್ಯುರಿಟಿ ಗಾರ್ಡ್ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ನವೀನ್‌ರಾಜ್ (40) ಅತ್ಯಾಚಾರ ಎಸಗಿದ ಆರೋಪಿ.
ಈತ ಹಾರೋಹಳ್ಳಿಯ ಖಾಸಗಿ ಕಂಪನಿಯಲ್ಲಿ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದ, ಈತ ಕೆಲಸ ಮಾಡುತ್ತಿದ್ದ ಪಕ್ಕದ ಮನೆಯಲ್ಲಿ ಸಂತ್ರಸ್ಥೆ ಒಬ್ಬಳೇ ಇರುವುದನ್ನು ತಿಳಿದು ಸೆ.29ರಂದು ಅವರ ಮನೆಗೆ ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಿಧಾನವಾಗಿ ತನ್ನ ಮೇಲೆ ಅತ್ಯಾಚಾರ ನಡೆದಿರುವ ಸಂಗತಿಯನ್ನು ಸಂತ್ರಸ್ತೆ ತಾಯಿಗೆ ಹೇಳಿದ್ದಾಳೆ. ಕೂಡಲೇ ಸಂತ್ರಸ್ತೆಯ ತಾಯಿ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.