ಮತ್ಸ್ಯಕನ್ಯೆಗೆ ಜನ್ಮ ನೀಡಿದ ತಾಯಿ!

ಧಮತರಿ: ಛತ್ತೀಸಗಢದ ಧಮತರಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಅಕ್ಟೋಬರ್ 1ರಂದು ಅಪರೂಪದ ಪ್ರಕರಣ ದಾಖಲಾಗಿದೆ. 28 ವರ್ಷದ ಮಹಿಳೆಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಜನಿಸಿದ ಮಗು ಮತ್ಸ್ಯಕನ್ಯೆಯ  (ಸಿರೆನೋಮೆಲಿಯಾ) ರೂಪ ಹೊಂದಿತ್ತು. ಜನನದ ಬಳಿಕ ಮಗು ಕೇವಲ ಮೂರು ಗಂಟೆಗಳ ಕಾಲ ಬದುಕಿ ಸಾವನ್ನಪ್ಪಿತು.

ಮಗುವಿನ ಮೇಲ್ಭಾಗ (ಕಣ್ಣು, ಮೂಗು, ಹೃದಯ) ಸಾಮಾನ್ಯವಾಗಿದ್ದರೂ, ಕೆಳಭಾಗ ಬೆಳವಣಿಗೆಯಾಗಿರಲಿಲ್ಲ. ಎರಡೂ ಕಾಲುಗಳು ಮತ್ಸ್ಯಕನ್ಯೆಯ ಬಾಲದಂತೆ ಅಂಟಿಕೊಂಡಿದ್ದವು. ಮಗುವಿನ ತೂಕ ಸುಮಾರು 800 ಗ್ರಾಂ ಇತ್ತು.

ಮತ್ಸ್ಯಕನ್ಯೆ ಸಿಂಡ್ರೋಮ್ ಎಂದರೇನು?
ಬೆನ್ನುಮೂಳೆ ಕೆಳಭಾಗ, ಸೊಂಟದಿಂದ ಕೆಳಗಿನ ಭಾಗ, ಜನನಾಂಗಗಳು ಬೆಳೆಯದೆ ಇರುವುದು. ಕಾಲುಗಳು ಒಂದಾಗಿ ಅಂಟಿಕೊಂಡು ಮತ್ಸ್ಯಕನ್ಯೆಯ ಬಾಲದಂತಿರುತ್ತದೆ. ಇದು ಅತ್ಯಂತ ಅಪರೂಪದ ಜನ್ಮದೋಷ; ವಿಶ್ವದಲ್ಲಿ ಸುಮಾರು 1,00,000 ಜನನಗಳಲ್ಲಿ 1 ಮಗು ಮಾತ್ರ ಈ ಸ್ಥಿತಿಯಲ್ಲಿ ಹುಟ್ಟುತ್ತದೆ.

ಧಮತರಿ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ರಾಗಿಣಿ ಸಿಂಗ್ ಠಾಕೂರ್ ಪ್ರಕಾರ, ಈವರೆಗೆ ಜಗತ್ತಿನಾದ್ಯಂತ ಕೇವಲ 300 ಪ್ರಕರಣಗಳು ಮಾತ್ರ ದಾಖಲಾಗಿವೆ. ಭಾರತದಲ್ಲಿ ಮೊದಲ ಪ್ರಕರಣ 2016ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿತ್ತು.

error: Content is protected !!