ಕನ್ನಡದಿಂದ ಸಿನಿ ವೃತ್ತಿಜೀವನ ಆರಂಭಿಸಿ ಬಹುಭಾಷೆಗಳಲ್ಲಿ ಜನಪ್ರಿಯರಾದ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಜೋಡಿಯ ಪ್ರೇಮ ವದಂತಿ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದೀಗ, ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತು ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.
ವರದಿಗಳ ಪ್ರಕಾರ, ಹೈದರಾಬಾದ್‌ನಲ್ಲಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಿನ್ನೆ ನಿಶ್ಚಿತಾರ್ಥ ನಡೆದಿದ್ದು, 2026ರ ಫೆಬ್ರವರಿಯಲ್ಲಿ ಮದುವೆ ನಡೆಯಲಿದೆ.
ಇವರ ಜೋಡಿ ಮೊದಲ ಬಾರಿಗೆ 2018ರಲ್ಲಿ ಗೀತಾ ಗೋವಿಂದಂ ಚಿತ್ರದಲ್ಲಿ ತೆರೆ ಹಂಚಿಕೊಂಡಿತ್ತು. ಬಳಿಕ ಸ್ನೇಹ ಪ್ರೀತಿಯಾಗಿ ಬದಲಾಗಿದೆ ಎಂಬ ವದಂತಿ ಹಲವಾರು ಬಾರಿ ಕೇಳಿಬಂದಿತ್ತು. ಒಟ್ಟಿಗೆ ಕಾರ್ಯಕ್ರಮಗಳಲ್ಲಿ ಹಾಜರಾಗುವುದು, ವೆಕೇಶನ್‌ಗಳಲ್ಲಿ ಕಾಣಿಸಿಕೊಳ್ಳುವುದು ವದಂತಿಗಳಿಗೆ ಇನ್ನಷ್ಟು ಬಲ ನೀಡುತ್ತಿತ್ತು.
ವಿಜಯ್ ಸ್ವತಃ ಇತ್ತೀಚಿನ ಸಂದರ್ಶನಗಳಲ್ಲಿ “ನನ್ನ ಜೀವನದಲ್ಲಿ ಗೆಳತಿಗೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದೇನೆ” ಎಂದು ಹೇಳಿಕೊಂಡಿದ್ದರು. ಇದೇ ವೇಳೆ, ತಮ್ಮ ಪ್ರೀತಿ ನಿರೀಕ್ಷೆಗಳೊಂದಿಗೆ ಬರುತ್ತದೆ ಎಂಬುದನ್ನೂ ಸ್ಪಷ್ಟಪಡಿಸಿದ್ದರು.
ಸಿನಿಮಾ ವಿಚಾರದಲ್ಲಿ, ವಿಜಯ್ ಅವರ ಮುಂದಿನ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ. 1800ರ ದಶಕದ ಬ್ರಿಟಿಷ್ ಆಳ್ವಿಕೆಯ ಪಾಶ್ವಭೂಮಿಯ ಈ ಪ್ರಾಜೆಕ್ಟ್‌ಗೆ ಸಂಬಂಧಿಸಿದ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ.