ರಾಜಸ್ಥಾನ: ರಾಜಸ್ಥಾನದ ಅನುಪ್‌ಗಢದ ಪಾಕಿಸ್ತಾನ-ಭಾರತದ ಗಡಿಯಲ್ಲೇ ವಿಜಯದಶಮಿಯ ಸಂದರ್ಭದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಪಾಕ್ ವಿರುದ್ಧ ಯುದ್ಧದ ಪೂರ್ವಭಾವಿಯಂತೆ ತನ್ನ ಕಟುಕ್ತಿಗಳಲ್ಲಿ ಶಂಖಾನಾದ ಮೊಳಗಿಸಿದ್ದು, ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದ್ರೆ ಅದು ಭೂಪಟದಲ್ಲೇ ಇರಲ್ಲʼ ಎಂದು ಹೇ ಳುವ ಮೂಲಕ ಮತ್ತೊಂದು ಆಪರೇಶಷನ್ ಸಿಂಧೂರ್ ನಡೆಸುವ ಸುಳಿವನ್ನು ನೀಡಿದ್ದಾರೆ.
“ಈ ಬಾರು ಆಪರೇಷನ್ ಸಿಂಧೂರ್ 1.0 ಸಮಯದಲ್ಲಿ ತೋರಿಸಿದ ಸಂಯಮವನ್ನು ನಾವು ಮತ್ತೆ ತೋರಿಸುವುದಿಲ್ಲ. ಪಾಕಿಸ್ತಾನ ಮತ್ತೆ ನಮ್ಮ ಶಾಂತಿಯನ್ನು ಪ್ರಚೋದಿಸಿದರೆ, ಅದು ತೀವ್ರ ಪ್ರತಿಕ್ರಿಯೆಗೆ ಸಿದ್ಧವಾಗಿರಲಿ. ಪಾಕಿಸ್ತಾನ ತನ್ನ ಭೌಗೋಳಿಕ ನಕ್ಷೆಯಲ್ಲಿ ಉಳಿಯಲು ಬಯಸಿದರೆ, ತಕ್ಷಣವೇ ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸಬೇಕು.” ಎಂದು ಸವಾಲು ಹಾಕಿದ್ದಾರೆ.
ಶತ್ರು ಪಾಳಯಕ್ಕೆ ನಡುಕ ಹುಟ್ಟಿಸಿದಂತೆ ಘರ್ಜಿಸಿದ ದ್ವಿವೇದಿ, ಸೈನಿಕರ ಉತ್ಸಾಹ, ದೇಶಪ್ರೇಮವನ್ನು ಮುಕ್ತಕಂಠದಿಂದ ಕೊಂಡಾಡಿದರು.
ಆಪರೇಷನ್ ಸಿಂಧೂರ್ 1.0 ಒಂದು ಸ್ಯಾಂಪಲ್ ಅಷ್ಟೆ
ಮೇ 7 ರಂದು ನಡೆದ ಆಪರೇಷನ್ ಸಿಂಧೂರ್ 1.0 ನಲ್ಲಿ, ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಿಒಕೆ ಪ್ರದೇಶಗಳಲ್ಲಿ ಒಂಬತ್ತು ಉಗ್ರರ ಅಡಗು ತಾಣಗಳನ್ನು ಭಸ್ಮವಾಡಿತು. ನಿಖರ ದಾಳಿಯ ಫಲವಾಗಿ 100 ಕ್ಕೂ ಹೆಚ್ಚು ಉಗ್ರರು ನಾಶವನ್ನಪ್ಪಿದರು. ಇದು ಕೇವಲ ಸ್ಯಾಂಪಲ್ ಅಷ್ಟೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಗೆ ಸಜ್ಜನ ಪ್ರತಿಕಾರವಾಗಿತ್ತು, ಅಲ್ಲಿ 26 ಅಮಾಯಕರು ಬಲಿಯಾಗಿದ್ದರು. ಈ ಬಾರಿ ಪ್ರತಿಕಾರ ಊಹಿಸದಷ್ಟೂ ಭೀಕರವಾಗಿರುತ್ತದೆ ಎಂದು ಗುಡುಗಿದ್ದಾರೆ.
ಆಪರೇಷನ್ 2.0 ಮುನ್ನೆಚ್ಚರಿಕೆ
ಜನರಲ್ ದ್ವಿವೇದಿ ಸೈನಿಕರಿಗೆ “ಪೂರ್ಣವಾಗಿ ಸಜ್ಜಾಗಿರಿ. ದೇವರ ಆಶೀರ್ವಾದದಿಂದ, ಶೀಘ್ರದಲ್ಲೇ ನಿಮ್ಮ ಮುಂದಿನ ಅವಕಾಶ ಬರುತ್ತದೆ. ನಾವು ಒಂದು ಹೆಜ್ಜೆ ಮುಂದೆ ಹೋಗುವೆವು. ಈ ಎಚ್ಚರಿಕೆ ಕೇವಲ ಮಾತಲ್ಲ, ಅದು ದೇಶದ ಗರಿಮೆಗೆ, ಗಡಿಯ ಶಕ್ತಿ ಮತ್ತು ಪ್ರಾಬಲ್ಯದ ಸಂಕೇತವಾಗಿದೆ ಎಂದಿದ್ದಾರೆ.