ಮುಂಬೈ: ಅಕ್ಟೋಬರ್ 2 ರಂದು ಬಿಡುಗಡೆಯಾದ ಜಾನ್ವಿ ಕಪೂರ್ ಮತ್ತು ವರುಣ್ ಧವನ್ ಅಭಿನಯದ ʻಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿʼ ಚಿತ್ರ ಮೊದಲ ದಿನವೇ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದಿದೆ. ರೋಮ್ಯಾಂಟಿಕ್ ದೃಶ್ಯ, ಹಾಸ್ಯ ಶೈಲಿಯ ಈ ಚಿತ್ರವು ರಜಾದಿನದ ಲಾಭ ಪಡೆದು ₹9.25 ಕೋಟಿ ಗಳಿಸಿದೆ.
ಚಿತ್ರದಲ್ಲಿ ಜಾನ್ವಿ–ವರುಣ್ ನಡುವಿನ ಕೆಲವು ರೋಮ್ಯಾಂಟಿಕ್ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆದಿವೆ. ವಿಶೇಷವಾಗಿ, ನಾಲ್ಕು ನಿಮಿಷಗಳ ಕಾಲದ ದೀರ್ಘ ಚುಂಬನದ ದೃಶ್ಯ ಮತ್ತು ಜಾನ್ವಿ ಹಾಗೂ ವರುಣ್ ಹಸಿಬಿಸಿ ದೃಶ್ಯಗಳಿದ್ದರೂ ಪರಸ್ಪರ ಭಾವನೆಗಳನ್ನು ಬಿಚ್ಚಿಡುವ ಸ್ವಚ್ಛಂದ ಮಾತುಗಳು ಚಿತ್ರಕಥೆಗೆ ಹೊಸ ಮೆರುಗು ನೀಡಿವೆ.
ಜಾನ್ವಿ ಕಪೂರ್ ತಮ್ಮ ಏಳು ವರ್ಷಗಳ ವೃತ್ತಿಜೀವನದಲ್ಲಿ ಹಲವಾರು ಉತ್ತಮ ಅಭಿನಯಗಳನ್ನು ನೀಡಿದ್ದಾರೆ. ಅಷ್ಟೊಂದು ರೂಪಸಿಯಾಗಿದ್ದರೂ ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದ್ದು ಕಡಿಮೆಯೇ. ಆದರೆ ಈ ಚಿತ್ರದಲ್ಲಿ ಜಾನ್ವಿ ಪ್ರಬುದ್ಧವಾಗಿ ಅಭಿನಯಿಸಿದ್ದು ಮತ್ತೊಮ್ಮೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ನ್ಯಾಚುರಲ್ ಅಭಿನಯ ಶೈಲಿ ಮತ್ತು ಆತ್ಮೀಯತೆ ನಿರೂಪಣೆ ಚಿತ್ರದ ಪ್ಲಸ್ ಪಾಯಿಂಟ್.
ವರುಣ್ ಧವನ್ ಅವರ ಪಾತ್ರ ʻಸಂಸ್ಕಾರಿʼ ಶೀರ್ಷಿಕೆಯ ಹಾಸ್ಯಮಯ ಅರ್ಥ ಹೊಂದಿದ್ದು, ನಿರ್ದೇಶಕ ಶಶಾಂಕ್ ಖೈತಾನ್ ಅವರ ನಿರೂಪಣೆಗೆ ತಕ್ಕ ಪ್ರತಿಫಲ ನೀಡಿದೆ. ನಿರ್ದೇಶಕರು ಕಥೆಯ ಹಾಸ್ಯ, ರೋಮಾನ್ಸ್ ಮತ್ತು ಕುಟುಂಬ ಮನರಂಜನೆಯ ಅಂಶಗಳನ್ನು ಸಮನ್ವಯಗೊಳಿಸಲು ಯಶಸ್ವಿಯಾಗಿದ್ದಾರೆ.
ಪ್ರಾಥಮಿಕ ವಿಮರ್ಶೆಗಳಲ್ಲಿ ಸಿನೆಮಾ ಪ್ರೇಮಿಗಳು ಈ ಚಿತ್ರವನ್ನು “ಪೂರ್ಣ ಕೌಟುಂಬಿಕ ಮನರಂಜನೆ” ಎಂದು ಗುರುತಿಸಿದ್ದಾರೆ. ವಿಮರ್ಶಕರೂ ಕೂಡಾ ಚಿತ್ರಕ್ಕೆ ಧನಾತ್ಮಕ ಅಂಕಿತ ನೀಡಿದ್ದು, ಜಾನ್ವಿ–ವರುಣ್ ಜೋಡಿ ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಇನ್ನಷ್ಟು ಸಾಧನೆ ಮಾಡುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.