ಮಾರಕಾಸ್ತ್ರದಿಂದ ಬರ್ಬರವಾಗಿ ಕೊಚ್ಚಿ ವೃದ್ಧೆಯ ಹತ್ಯೆ !!

ಶಿವಮೊಗ್ಗ: ತಾಲೂಕಿನ ಕುಂಸಿಯ ರಥಬೀದಿಯ ಮನೆಯಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ವೃದ್ಧೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಬಸಮ್ಮ (65) ಕೊಲೆಯಾದ ವೃದ್ಧೆ.

ಬಸಮ್ಮ ಶಿವಮೊಗ್ಗದ ರಥಬೀದಿ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ವೃದ್ಧೆಯ ಪುತ್ರ ಗುರುವಾರ(ಅ.2) ಮನೆಗೆ ಬಂದು ಗಮನಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಬಸಮ್ಮರ ಕುತ್ತಿಗೆ ಕೊಯ್ದು, ಹೊಟ್ಟೆ ಭಾಗದಲ್ಲಿ ಹಲವೆಡೆ ಇರಿಯಲಾಗಿದೆ ಎಂದು ತಿಳಿದುಬಂದಿದೆ.

ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

error: Content is protected !!