ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಒಂಬತ್ತನೇ ಬಾರಿಗೆ ಚಾಂಪಿಯನ್ ಪಟ್ಟ ಕಿತ್ತಿದ್ದರೂ, ಟೀಂ ಇಂಡಿಯಾದ ಕೈಗೆ ಇನ್ನೂ ಟ್ರೋಫಿ ತಲುಪಿಲ್ಲ.
ಟ್ರೋಫಿ ಹಸ್ತಾಂತರದ ವೇಳೆ ಪಾಕಿಸ್ತಾನದ ಗೃಹ ಸಚಿವ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಹಠ ಹಿಡಿದಿದ್ದರು. “ಟ್ರೋಫಿ ನಾನೇ ನೀಡಬೇಕು” ಎಂಬ ಹಠದಿಂದ ದುಬೈ ಸ್ಟೇಡಿಯಂನಲ್ಲಿ ದೊಡ್ಡ ಡ್ರಾಮಾ ನಡೆದಿದ್ದು, ಕೊನೆಗೂ ಮುಖಭಂಗಗೊಂಡ ನಖ್ವಿ ಟ್ರೋಫಿ, ಮೆಡಲ್‌ಗಳೊಂದಿಗೆ ಮೈದಾನ ಬಿಟ್ಟು ಹೊಟೆಲ್‌ಗೆ ಹೋದರು.
ಭಾರತ ಟ್ರೋಫಿ ಇಲ್ಲದೇ ಸಂಭ್ರಮಾಚರಣೆ ನಡೆಸಬೇಕಾಯಿತು. ಬಿಸಿಸಿಐ ಮತ್ತು ಆಟಗಾರರು ನಖ್ವಿಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಕಥೆ ಇಲ್ಲಿ ಮುಗಿದಿಲ್ಲ! ನಖ್ವಿ ಈಗ ಮತ್ತೊಂದು ವಿಚಿತ್ರ ಬೇಡಿಕೆ ಮುಂದಿಟ್ಟಿದ್ದಾರೆ. ಅವರು ಹೇಳಿದ್ದೇನು ಗೊತ್ತಾ? — “2025ರ ಏಷ್ಯಾಕಪ್ ಟ್ರೋಫಿ ಹಾಗೂ ಮೆಡಲ್‌ಗಳನ್ನು ಸೂರ್ಯಕುಮಾರ್ ಯಾದವ್ ಬಂದು ದುಬೈಯಲ್ಲಿ ಸ್ವೀಕರಿಸಲಿ!”
ಇದರಿಂದ ಕ್ರಿಕೆಟ್ ಜಗತ್ತು ಪಾಕಿಸ್ತಾನದ ವಿರುದ್ಧ ಉರಿದು ಬಿದ್ದಿದೆ. ಚಾಂಪಿಯನ್ ಆಗಿ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ, ಇದುವರೆಗೆ ಕಪ್ ಸಿಗದೇ ಇರೋದ್ರ ಹಿನ್ನಲೆ ಏನು? ಅಂತ ಭಾರತ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.