ಮಂಗಳೂರು: ಕಾಂತಾರ: ಚಾಪ್ಟರ್ 1’ ಸಿನಿಮಾ ಫೀವರ್ ಜೋರಾಗಿದೆ. ಅಕ್ಟೋಬರ್ 2ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದೆ. ಎಲ್ಲ ಕಡೆಗಳಿಂದ ಸಿನಿಮಾ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಚಿತ್ರ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂಬ ಕುತೂಹಲ ಮೂಡಿದೆ. ಹೀಗಿರುವಾಗಲೇ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪ್ರೇಕ್ಷಕ ದೈವ ಬಂದಂತೆ ಆಡಿದ್ದಾನೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ದೈವದ ವಿಚಾರ ಹೇಳಲಾಗಿದೆ. ‘ಕಾಂತಾರ’ದಲ್ಲಿ ಪಂಜುರ್ಲಿ ಬಗ್ಗೆ ಹೇಳಿದರೆ, ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಗುಳಿಗ ದೈವವನ್ನು ಹೈಲೈಟ್ ಮಾಡಲಾಗಿದೆ. ರಿಷಬ್ ಅವರನ್ನು ಎಲ್ಲರೂ ಕೊಂಡಾಡಿದ್ದಾರೆ. ಅವರು ನಿಜವಾಗಿಯೂ ದೈವ ಬಂದಂತೆ ನಟಿಸಿದ್ದಾರೆ ಎಂಬುದು ಅನೇಕರ ಅಭಿಪ್ರಾಯ. ಈಗ ‘ಕಾಂತಾರ: ಚಾಪ್ಟರ್ 1’ ನೋಡಿ ಬಂದ ಅಭಿಮಾನಿಯೋರ್ವ ದೈವ ಬಂದಂತೆ ಆಡಿರುವ ವಿಡಿಯೋ ವೈರಲ್ ಆಗಿದೆ.
ರಿಷಬ್ ಶೆಟ್ಟಿ ಅವರು ‘ಓ..’ ಎಂದು ಸಿನಿಮಾದಲ್ಲಿ ಕೂಗುತ್ತಾರೆ. ಈ ವ್ಯಕ್ತಿ ಕೂಡ ‘ಓ..’ ಎಂದು ಕೂಗಾಡಿದ್ದಾನೆ. ಆ ಬಳಿಕ ‘ದೇವರ ದರ್ಶನ ಆಯ್ತು, ಸಿನಿಮಾ ಚೆನ್ನಾಗಿದೆ’ ಎಂದು ಆ ವ್ಯಕ್ತಿ ಹೇಳಿದ್ದಾನೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ನಾಟಕ ಎಂದು ಕರೆದಿದ್ದಾರೆ.
ರಿಷಬ್ ಶೆಟ್ಟಿ ಅವರ ‘ಕಾಂತಾರ’ ಸಿನಿಮಾ ದೈವದ ಬಗ್ಗೆ ಇತ್ತು. ಈಗ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ಅದೇ ವಿಷಯ ಹೇಳಲಾಗಿದೆ. ರಿಷಬ್ ಪರ್ಫಾರ್ಮೆನ್ಸ್ನ ಎಲ್ಲರೂ ಕೊಂಡಾಡಿದ್ದಾರೆ. ರುಕ್ಮಿಣಿ ವಸಂತ್ ಸ್ಪೆಷಲ್ ಪ್ಯಾಕೇಜ್ ಆಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ಎಲ್ಲರೂ ಹೊಗಳುತ್ತಿದ್ದಾರೆ. ಉಳಿದ ಅನೇಕ ಪಾತ್ರಗಳು ಮೆಚ್ಚುಗೆ ಪಡೆಯುವ ರೀತಿಯಲ್ಲಿ ಇವೆ.