ಮಧ್ಯಪ್ರದೇಶ: ಕಾಡಿನ ನೆಲದಡಿಯಲ್ಲಿ, ತಣ್ಣನೆಯ ಗಾಳಿಯಲಿ ಆಕಾನ್ನೇ ಛತ್ರಛಾಯೆ ಮಾಡಿಕೊಂಡು ಆಗ ತಾನೇ ಹುಟ್ಟಿದ ನವಜಾತ ಶಿಶುವೊಂದು ಅಳುತ್ತಿರುವ ದೃಶ್ಯ ಕಂಡು ಊರವರು ಬೆಚ್ಚಿಬಿದ್ದ ಘಟನೆ ಚಿಂದ್ವಾರ ಜಿಲ್ಲೆಯ ನಂದನವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಶಿಶುವಿನ ಅಳುವಿನಿಂದ ಎಚ್ಚರಗೊಂಡ ಗ್ರಾಮಸ್ಥರು ತಕ್ಷಣದಲ್ಲಿಯೇ ಸ್ಥಳಕ್ಕೆ ಬಂದು, ಕೀಟಗಳಿಂದ ಕಚ್ಚಲ್ಪಟ್ಟ ಮತ್ತು ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ನವಜಾತ ಶಿಶುವನ್ನು ಕಲ್ಲಿನ ಕೆಳಗಡೆ ಪತ್ತೆಹಚ್ಚಿದರು. ಶಿಶುವನ್ನು ಜೀವಂತವಾಗಿ ರಕ್ಷಿಸಲಾಗಿದೆ ಮತ್ತು ಪ್ರಸ್ತುತ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇದೆ.
ಪೋಲಿಸರು ನಿಖೆ ನಡೆಸಿದ ವೇಳೆ ಅತ್ಯಂತ ಕ್ರೂರ ಘಟನೆಯೊಂದು ಬೆಳಕಿಗೆ ಬಂದಿದೆ. ಶಿಶುವಿನ ಪೋಷಕರಾದ ಸರ್ಕಾರಿ ಶಿಕ್ಷಕರಾದ ಬಬ್ಲು ದಾಂಡೋಲಿಯಾ ಮತ್ತು ರಾಜಕುಮಾರಿ ದಾಂಡೋಲಿಯಾ ತಮ್ಮ ಮಗುವನ್ನು ತ್ಯಜಿಸಲು ನಿರ್ಧರಿಸಿದ್ದಾಗಿ ತಿಳಿದುಬಂದಿದೆ. ಅದಕ್ಕೆ ಕಾರಣವೂ ಇದೆ.
ಅವರು ತನ್ನ ಸರ್ಕಾರಿ ಉದ್ಯೋಗ ಕಳೆದುಕೊಳ್ಳುವ ಭಯದಿಂದ ತಮ್ಮ ನಾಲ್ಕನೇ ಶಿಶುವನ್ನು ಜನ್ಮದಿನದ ಕೆಲವೇ ಗಂಟೆಗಳಲ್ಲಿಯೇ ಕಾಡಿಗೆ ಕರೆದು ಕಲ್ಲಿನ ಕೆಳಗೆ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್‌ಡಿಒಪಿ ಕಲ್ಯಾಣಿ ಬರ್ಕಡೆ ಪ್ರಕಾರ “ಮಕ್ಕಳನ್ನು ತ್ಯಜಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಕಾನೂನು ಪರಿಶೀಲನೆಯ ನಂತರ ಕೊಲೆ ಪ್ರಯತ್ನ ಸೇರಿದಂತೆ ಹೆಚ್ಚಿನ ಪ್ರಕರಣಗಳಲ್ಲಿ ದಾಖಲಿಸಲಾಗುವುದು” ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿ ಮಾಹಿತಿ ಪ್ರಕಾರ, ಮಧ್ಯಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ಪರಿತ್ಯಕ್ತ ನವಜಾತ ಶಿಶುಗಳ ಪ್ರಕರಣಗಳನ್ನು ಹೊಂದಿದೆ. ಬಡತನ, ಸಾಮಾಜಿಕ ಕಳಂಕ ಮತ್ತು ಉದ್ಯೋಗ ನಿಲುವಿನ ಭಯಗಳು ಇಂತಹ ದುರ್ಘಟನೆಗಳಿಗೆ ಕಾರಣವಾಗುತ್ತವೆ ಎಂದು ತಜ್ಞರು ಹೇಳಿದರು. ಆದರೆ ಈ ಪ್ರಕರಣವು ವಿಶಿಷ್ಟವಾಗಿದೆ ಏಕೆಂದರೆ ಇದು ಹತಾಶೆಯಿಂದ ಅಲ್ಲ, ಬದಲಿಗೆ ಜವಾಬ್ದಾರಿಯುತ ಕುಟುಂಬವೇ ತನ್ನ ಮುದ್ದು ಮಗುವನ್ನು ತ್ಯಜಿಸಿದ್ದಾರೆ.
ಮಧ್ಯಪ್ರದೇಶದಲ್ಲಿ 2001 ರ ಜನವರಿ 26 ರಿಂದ ಎರಡು ಮಕ್ಕಳ ನೀತಿ ಇದೆ. ಇದರ ಪ್ರಕಾರ, ಸರ್ಕಾರಿ ಉದ್ಯೋಗಿಗಳಿಗೆ ಮೂರು ಅಥವಾ ಹೆಚ್ಚು ಮಕ್ಕಳಿದ್ದರೆ ಅವರು ಸೇವೆಗೆ ಅರ್ಹರಾಗುವುದಿಲ್ಲ ಎಂದಿದೆ.