ತುಮಕೂರು: ಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾ ಕಳೆದ ಕೆಲ ಸಮಯದಿಂದ ಚಿತ್ರರಂಗದಿಂದ ನಟಿಯಾಗಿ ದೂರವಾಗಿ ಉಳಿದಿದ್ದರು. ಕೆಲ ಸಮಯದ ಹಿಂದೆ ರಮ್ಯಾ ಅವರು ಚಿತ್ರರಂಗಕ್ಕೆ ಮರಳುವ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಡಾಲಿ ಧನಂಜಯ್ – ರೋಹಿತ್ ಪದಕಿ ಅವರ ‘ಉತ್ತರಕಾಂಡ’ ಸಿನಿಮಾದಲ್ಲಿ ರಮ್ಯಾ ನಟಿಸುವ ಬಗ್ಗೆ ಅಧಿಕೃತವಾಗಿ ಸುದ್ದಿ ಘೋಷಣೆ ಆಗಿತ್ತು. ಆದರೆ ಆ ಬಳಿಕ ಅವರು ಚಿತ್ರದಿಂದ ಹೊರಬಂದಿದ್ದರು.
ಇನ್ನು ʼಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರದಲ್ಲೂ ಸ್ಯಾಂಡಲ್ ವುಡ್ ಕ್ವೀನ್ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಆ ಚಿತ್ರದಲ್ಲಿ ನಟಿಯ ಬದಲು ನಿರ್ಮಾಪಕಿಯಾಗಿ ಜವಾಬ್ದಾರಿ ನಿಭಾಯಿಸಿದ್ದರು. ಇದೀಗ ರಮ್ಯಾ ಅವರು ಮತ್ತೆ ಚಿತ್ರರಂಗಕ್ಕೆ ಬರುವ ಬಗ್ಗೆ ಸುಳಿವು ನೀಡಿದ್ದಾರೆ. ತುಮಕೂರು ಜಿಲ್ಲಾಡಳಿತದಿಂದ ಆಯೋಜಿಸಿರುವ ದಸರಾ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ದಸರಾ ವೈಭವ ಕಾರ್ಯಕ್ರಮದಲ್ಲಿ ರಮ್ಯಾ ಅವರು ಕಂಬ್ಯಾಕ್ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
ಒಳ್ಳೆಯ ಕಥೆಗೆ ಕಾಯುತ್ತಿದ್ದೆ. ಇದೀಗ ಉತ್ತಮ ಕಥೆ ಬಂದಿದ್ದು, ಸಿನಿಮಾ ಮಾಡುತ್ತೇನೆ. ಶೀಘ್ರದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ರಮ್ಯಾ ಅವರು ಕಂಬ್ಯಾಕ್ ಸುಳಿವು ನೀಡಿದ್ದಾರೆ.