“ಗಟ್ಟಿಮೇಳ” ಖ್ಯಾತಿಯ ಹಿರಿಯ ಕಲಾವಿದೆ ಕಮಲಶ್ರೀ ಕ್ಯಾನ್ಸರ್‌ಗೆ ಬಲಿ !!

ಬೆಂಗಳೂರು: ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗಟ್ಟಿಮೇಳ, ಕಾವೇರಿ ಕನ್ನಡ ಮೀಡಿಯಂ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಹಿರಿಯ ಕಲಾವಿದೆ ಕಮಲಶ್ರೀ(76) ಅವರು ಮಂಗಳೂರು(ಸೆ.30) ರಂದು ನಿಧ‌ನರಾಗಿದ್ದಾರೆ.

ಕಮಲಶ್ರೀ ಅವರು ಗಟ್ಟಿಮೇಳ ಸೇರಿದಂತೆ ಹಲವಾರು ಹಿಟ್‌ ಸೀರಿಯಲ್‌ಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡಿದ್ದರು. ನಾಡಿನಾದ್ಯಂತ ಸಾಕಷ್ಟು ಮೆಚ್ಚುಗೆ ಹಾಗೂ ಅಭಿಮಾನಿಗಳನ್ನು ಪಡೆದಿದ್ದರು. ಹಿರಿಯ ನಟಿ ಕಮಲಶ್ರೀ ಅವರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಟಿ ಕಮಲಶ್ರೀ ಅವರಿಗೆ ಕೆಲ ವರ್ಷಗಳಿಂದ ಸ್ತನ ಕ್ಯಾನ್ಸರ್‌ ಆಗಿತ್ತು. ಈ ರೋಗದ ವಿರುದ್ಧ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಗಟ್ಟಿಮೇಳ ಧಾರಾವಾಹಿಯ ವೇದಾಂತ್‌ ಅಜ್ಜಿ ಪಾತ್ರ ಮಾಡಿದ್ದ ನಟಿ ಕಮಲಶ್ರೀ ಅವರ ಅಂತ್ಯಕ್ರಿಯೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಅಕ್ಟೋಬರ್‌ 1ರಂದು ನಡೆಯಲಿದೆ. ಕಮಲಶ್ರೀ ಅವರಿಗೆ ಗಂಡ, ಮಕ್ಕಳು ಕೂಡ ಇಲ್ಲ. ಅನಾರೋಗ್ಯದ ಕಾರಣಕ್ಕೆ ದುಡಿಯಲು ಆಗದೆ, ಕೊನೆಯ ದಿನಗಳಲ್ಲಿ ಆರ್ಥಿಕವಾಗಿ ಹಿರಿಯ ನಟಿ ಕಮಲಶ್ರೀ ಅವರು ಕಷ್ಟಪಟ್ಟಿದ್ದರು. ಡಾ ರಾಜ್‌ಕುಮಾರ್‌ ಬ್ಯಾನರ್‌ನಲ್ಲಿಯೂ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ, ನಾಟಕದಲ್ಲಿಯೂ ಅಭಿನಯಿಸಿದ್ದಾರೆ. ಕಾವೇರಿ ಕನ್ನಡ ಮೀಡಿಯಂ, ಗಟ್ಟಿಮೇಳ, ಪತ್ತೆದಾರಿ ಪ್ರತಿಭಾ ಹೀಗೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದು, ಸೆಪ್ಟೆಂಬರ್‌ 30 ರಂದು ನಿಧನರಾಗಿದ್ದಾರೆ.

error: Content is protected !!