ಭಾರತದ ಐದನೇ ತಲೆಮಾರಿನ ಶತ್ರುನಾಶಕ ಸ್ಟೆಲ್ತ್ ಫೈಟರ್ ಅಭಿವೃದ್ಧಿಗೆ ವೇಗ: ಗಡಗಡ ನಡುಗಿದ ಚೀನಾ-ಪಾಕಿಸ್ತಾನ

ನವದೆಹಲಿ: ಭಾರತದ ಸ್ವದೇಶಿ ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧವಿಮಾನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (AMCA) ಯೋಜನೆಗೆ ದೊಡ್ಡ ಹೆಜ್ಜೆ ಇಡಲಾಗಿದೆ. ಈ ವಿಮಾನದ ಮೂಲಮಾದರಿಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಏಳು ಭಾರತೀಯ ಕಂಪನಿಗಳು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಜೊತೆ ಪಾಲುದಾರಿಕೆ ಮಾಡಲು ಮುಂದಾಗಿವೆ. ಭಾರತದ ಈ ಕ್ರಮದಿಂದಾಗಿ ಚೀನಾ ಹಾಗೂ ಶತ್ರು ರಾಷ್ಟ್ರಗಳು ಭಯದಿಂದ ಗಡಗಡ ನಡುಗಿದೆ.

ಅಧಿಕಾರಿಗಳ ಪ್ರಕಾರ, ಲಾರ್ಸೆನ್ & ಟೂಬ್ರೊ, HAL, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್, ಅದಾನಿ ಡಿಫೆನ್ಸ್ ಸೇರಿ ಕಂಪನಿಗಳ ಬಿಡ್‌ಗಳನ್ನು ಮೌಲ್ಯಮಾಪನ ಮಾಡುವ ಕಾರ್ಯ ನಡೆಯುತ್ತಿದ್ದು, ಅಂತಿಮವಾಗಿ ಎರಡು ಕಂಪನಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಇವರಿಗೆ ಸುಮಾರು ₹15,000 ಕೋಟಿ ರೂ. ವೆಚ್ಚದಲ್ಲಿ ಐದು ಮೂಲಮಾದರಿಗಳನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಗಲಿದೆ.

ಒಟ್ಟಾರೆಯಾಗಿ, ₹2 ಲಕ್ಷ ಕೋಟಿ ರೂ. ಉತ್ಪಾದನಾ ಯೋಜನೆಯಡಿ 125 ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ತಯಾರಿಸಲಾಗುವ ನಿರೀಕ್ಷೆಯಿದೆ. ಆದರೆ, 2035ರ ಮೊದಲು AMCA ವಾಯುಪಡೆಯ ಸೇರ್ಪಡೆ ಸಾಧ್ಯವಿಲ್ಲ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

Add image caption here

ಪ್ರಸ್ತುತ ಅಮೆರಿಕಾ, ಚೀನಾ ಮತ್ತು ರಷ್ಯಾ ಮಾತ್ರ ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಹೊಂದಿವೆ. AMCA ಕಾರ್ಯರೂಪಕ್ಕೆ ಬಂದರೆ, ಭಾರತವೂ ಈ ವಿಶಿಷ್ಟ ಪಟ್ಟಿಗೆ ಸೇರುತ್ತದೆ. ಭಾರತವು ಇತ್ತೀಚೆಗೆ ಫ್ರಾನ್ಸ್‌ನಿಂದ 26 ರಫೇಲ್-ಎಂ ಯುದ್ಧವಿಮಾನಗಳ ಖರೀದಿಗೆ ₹63,000 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ. ವಾಯುಪಡೆಯು ಈಗಾಗಲೇ 36 ರಫೇಲ್-ಸಿ ವಿಮಾನಗಳನ್ನು ಬಳಸುತ್ತಿದೆ. ದೇಶೀಯವಾಗಿ ನಿರ್ಮಿತ ವಿಮಾನವಾಹಕ ನೌಕೆ, ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ಸೇರ್ಪಡೆಗೊಂಡಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ 2033ರೊಳಗೆ $100 ಬಿಲಿಯನ್ ಮೌಲ್ಯದ ‘ಮೇಡ್ ಇನ್ ಇಂಡಿಯಾ’ ಶಸ್ತ್ರಾಸ್ತ್ರ ಒಪ್ಪಂದಗಳು ದೇಶೀಯ ರಕ್ಷಣಾ ಉತ್ಪಾದನೆಯನ್ನು ಬಲಪಡಿಸಲಿವೆ ಎಂದು ತಿಳಿಸಿದ್ದಾರೆ.

ವೈಶಿಷ್ಟ್ಯಗಳು
AMCA ಅವಳಿ ಎಂಜಿನ್, ಸ್ಟೆಲ್ತ್ ಸಾಮರ್ಥ್ಯದ ಯುದ್ಧವಿಮಾನವಾಗಿದ್ದು, 55,000 ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸಬಲ್ಲದು. ಆಂತರಿಕ ಬೇಗಳಲ್ಲಿ 1,500 ಕೆಜಿ ಹಾಗೂ ಬಾಹ್ಯವಾಗಿ 5,500 ಕೆಜಿ ಶಸ್ತ್ರಗಳನ್ನು ಸಾಗಿಸಬಲ್ಲದು. ಎರಡು ಆವೃತ್ತಿಗಳಲ್ಲಿ – ಮೊದಲನೆಯದು GE F414 ಎಂಜಿನ್, ನಂತರದದು ದೇಶೀಯ ಎಂಜಿನ್ ಹೊಂದಿರುವ ನಿರೀಕ್ಷೆ ಇದೆ.

error: Content is protected !!