ಲಕ್ನೋ: 35 ವರ್ಷದ ಮಹಿಳೆಯನ್ನು ವಿವಾಹವಾದ 75 ವರ್ಷ ವಯಸ್ಸಿನ ಸಂಗ್ರುರಾಮ್ ಎಂಬ ವ್ಯಕ್ತಿ ವಿವಾಹದ ಮರುದಿನವೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಜಾನ್ಪುರ ಜಿಲ್ಲೆಯ ಮುಚ್ಚುಮುಚ್ಚು ಗ್ರಾಮದಲ್ಲಿ ನಡೆದಿದೆ.
ಒಂದು ವರ್ಷದ ಹಿಂದಷ್ಟೇ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದ ಸಂಗ್ರುರಾಮ್ ಒಬ್ಬಂಟಿಯಾಗಿ ವಾಸವಿದ್ದರು. ಮಕ್ಕಳು ಇಲ್ಲದೇ ತಾವೇ ಸ್ವತಃ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಸಂಬಂಧಿಕರ ಸಲಹೆಯಂತೆ ಮರುವಿವಾಹಕ್ಕೆ ಒಪ್ಪಿಕೊಂಡ ಅವರು ಸೆಪ್ಟೆಂಬರ್ 29ರಂದು ಸೋಮವಾರ ಜಲಾಲ್ಪುರದ 35 ವರ್ಷ ವಯಸ್ಸಿನ ಮಂಬಾವತಿ ಎಂಬ ಮಹಿಳೆಯನ್ನು ವಿವಾಹವಾದರು. ಕೋರ್ಟ್ ನಲ್ಲಿ ನೋಂದಣಿ ಮಾಡಿಸಿದ ಬಳಿಕ ಸ್ಥಳೀಯ ದೇವಾಲಯದಲ್ಲಿ ವಿಧಿವಿಧಾನಗಳು ನಡೆದವು.