ಮಿಥುನ್ ರೈ ʻಪಿಲಿನಲಿಕೆʼಗೆ ಕಿಚ್ಚನ ಸಾಥ್! ಬಾಲಿವುಡ್, ಕ್ರಿಕೆಟ್ ತಾರೆಯರ ದಂಡು, ದಶಮ ಸಂಭ್ರಮಕ್ಕೆ ಅದ್ಧೂರಿ ವೇದಿಕೆ ಸಜ್ಜು!!

ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಯುವನಾಯಕ ಎಂ. ಮಿಥುನ್ ರೈ ನೇತೃತ್ವದಲ್ಲಿ ನಡೆಯುತ್ತಿರುವ ಪಿಲಿನಲಿಕೆ ಪಂಥ ತನ್ನ ದಶಮ ಸಂಭ್ರಮವನ್ನು ಆಚರಿಸಲು ಸಜ್ಜಾಗಿದೆ. ಅಕ್ಟೋಬರ್ 1ರಂದು ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕಾಗಿ ಭಾರೀ ಸಿದ್ಧತೆಗಳು ಜೋರಾಗಿವೆ. ಈ ಬಾರಿಯ ʻಪಿಲಿನಲಿಕೆʼಗೆ ಕಿಚ್ಚನ ಸಾಥ್ ಇರರಲಿದ್ದು, ಬಾಲಿವುಡ್, ಕ್ರಿಕೆಟ್ ತಾರೆಯರ ದಂಡೇ ಆಗಮಿಸಲಿದೆ.

ಮಿಥುನ್‌ ರೈ ಹೇಳಿದಿಷ್ಟು:
ಪಿಲಿನಲಿಕೆಯ ಬಗ್ಗೆ ಅವರು ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ಬಾರಿ ಕಾರ್ಯಕ್ರಮಕ್ಕೆ ನಮ್ಮ ಟಿವಿ ಸಹಭಾಗಿತ್ವ ವಹಿಸುತ್ತಿದ್ದು, ಸಿನಿಮಾ ಮತ್ತು ಕ್ರೀಡಾ ಲೋಕದ ಅಗ್ರತಾರೆಗಳು ಆಗಮಿಸುವರು ಎಂದು ತಿಳಿಸಿದ್ದಾರೆ. ನಟರಾದ ಸುನಿಲ್ ಶೆಟ್ಟಿ, ಕಿಚ್ಚ ಸುದೀಪ್, ಪೂಜಾ ಹೆಗ್ಡೆ, ರಾಜ್ ಬಿ. ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಕ್ರಿಕೆಟ್ ಆಟಗಾರರಾದ ಅಂಜೆಕ್ಕಾರಹಾನೆ, ಜಿತೇಶ್ ಶರ್ಮಾ ಹಾಗೂ ಬಾಕ್ಸರ್ ವಿಜೇಂದ್ರ ಸಿಂಗ್ ಸೇರಿದಂತೆ ಗಣ್ಯರು ಪಿಲಿನಲಿಕೆ ಪಂಥ-10ಕ್ಕೆ ಹಾಜರಾಗಲಿದ್ದಾರೆ ಎಂದರು.

Kiccha Sudeep

ಕಾರ್ಯಕ್ರಮ ಸ್ಥಳದಲ್ಲಿ ಏಕಕಾಲಕ್ಕೆ 25 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಣೆಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ನಿರಂತರವಾಗಿ ನಡೆಯುವ ಸ್ಪರ್ಧೆಯಲ್ಲಿ ಪ್ರತಿಯೊಂದು ತಂಡಕ್ಕೂ 20 ನಿಮಿಷ ಸಮಯ ನೀಡಲಾಗುವುದು ಎಂದು ವಿವರಿಸಿದರು.

ಅಂತಿಮ ಹಂತಕ್ಕೆ ಆಯ್ಕೆಯಾದ ತಂಡಗಳು:
ಅಗಸ್ತ್ಯ ಮಂಗಳೂರು
ಶ್ರೀ ವೈದ್ಯನಾಥೇಶ್ವರ ಫ್ರೆಂಡ್ಸ್ ಟೈಗರ್ಸ್
ಮುಳಿಹಿತ್ಲು ಗೇಮ್ಸ್ ಟೀಮ್
ಅನಿಲ್ ಕಡಂಬೆಟ್ಟು
ಜೂನಿಯರ್ ಬಾಯ್ಸ್ ಚಿಲಿಂಬಿ
ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್
ಟ್ಯಾಲೆಂಟ್ ಟೈಗರ್ಸ್ ತುಳುನಾಡು
ಸೋಮೇಶ್ವರ ಫ್ರೆಂಡ್ಸ್ ಕ್ಲಬ್
ಪೊಳಲಿ ಟೈಗರ್ಸ್
ಗೋಕರ್ಣನಾಥ ಹುಲಿ
ಬಹುಮಾನ ಮೊತ್ತ – 26 ಲಕ್ಷ ರೂ.

ಈ ಬಾರಿಯ ಸ್ಪರ್ಧೆಗೆ ಒಟ್ಟು 20 ಲಕ್ಷ ರೂ. ಬಹುಮಾನಗಳನ್ನು ನಿಗದಿಪಡಿಸಲಾಗಿದ್ದು, ಪ್ರಥಮ ಬಹುಮಾನ 10 ಲಕ್ಷ ರೂ., ದ್ವಿತೀಯ 5 ಲಕ್ಷ ರೂ. ಹಾಗೂ ತೃತೀಯ 3 ಲಕ್ಷ ರೂ. ಫಲಕ ಸಮೇತ ನೀಡಲಾಗುವುದು. ಜೊತೆಗೆ ಪ್ರತೀ ತಂಡಕ್ಕೂ 50 ಸಾವಿರ ರೂ. ಗೌರವ ಧನ ದೊರೆಯಲಿದೆ. ವೈಯಕ್ತಿಕ ವಿಭಾಗಗಳಲ್ಲಿ ಕಪ್ಪುಹುಲಿ, ಮರಿಹುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ಸೇರಿದಂತೆ ಆರು ಪ್ರಶಸ್ತಿಗಳಿಗೆ ತಲಾ 50 ಸಾವಿರ ರೂ. ಮತ್ತು ಫಲಕ ನೀಡಲಾಗುತ್ತದೆ ಎಂದರು. ಪಿಲಿನಲಿಕೆ ಪಂಥ-10 ಅನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ದಶಮ ಸಂಭ್ರಮದ ಅಂಗವಾಗಿ ಮೂಡುಬಿದಿರೆ ಸರಕಾರಿ ತಾಲೂಕಿನ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ಪ್ರತಿಷ್ಠಾನ ಶ್ರಮಿಸಲಿದೆ. ಸಹಕಾರಿ ರತ್ನ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ವಿಶೇಷ ಗೌರವ ಸನ್ಮಾನ ಮಾಡಲಾಗುವುದು.

ದೇವರ ಆರಾಧನೆ:
ಮಾಧ್ಯಮ ಮಿತ್ರರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇವೆ. ಇದು ವೈಯಕ್ತಿಕ ಪ್ರಚಾರವಲ್ಲ, ದೇವರ ಆರಾಧನೆಯಾಗಿದೆ. ನಮ್ಮಲ್ಲಿ ಭಾಗವಹಿಸಿದ ಕಲಾವಿದರು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ತುಳುನಾಡಿನ ಸಂಪ್ರದಾಯದ ಪ್ರಕಾರ ಬಣ್ಣಗಾರಿಕೆ-ಕುಣಿತ‌ ಮುಂದುವರಿಯಬೇಕು ಎಂಬುವುದು ನಮ್ಮ ಆಶಯ. ಪಿಲಿನಲಿಕೆಗೆ ಹತ್ತನೇ ವರ್ಷ ತುಂಬುತ್ತಿರುವ ಸವಿನೆನಪಿನಲ್ಲಿ ಅಂಚೆ ಇಲಾಖೆಯ ಸಹಯೋಗದೊಂದಿಗೆ ʻಪಿಲಿನಲಿಕೆ ಪೋಸ್ಟ್‌ಕಾರ್ಡ್‌ʼ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ನುಡಿದರು.

ತುಳುನಾಡಿನ ಪಿಲಿನಲಿಕೆ ವಿಶ್ವಮಟ್ಟದಲ್ಲಿ ಹೆಸರು ಮಾಡಬೇಕು. ಅವರಿಗೆ ಶಾಶ್ವತ ವ್ಯವಸ್ಥೆಯಾಗಬೇಕು. ನಮ್ಮಲ್ಲಿ ಆಡಿದ್ದ ʻಸೋಮೇಶ್ವರ ಫ್ರೆಂಡ್ಸ್ ಸರ್ಕಲ್ʼ ತಂಡ ಇಂಡಿಯಾ ಗಾಟ್‌ ಟಾಲೆಂಟ್‌ನಲ್ಲಿ ಸ್ಪರ್ಧಿಸಿರುವುದು ನಿಜಕ್ಕೂ ನಮಗೆ ಹೆಮ್ಮೆ. ಪಿಲಿನಲಿಕೆಯಿಂದಾಗಿ ಅನೇಕ ಕಲಾವಿದರು ಹುಟ್ಟಿದ್ದು, ರಾಷ್ಟ್ರ-ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಸಿಕೊಂಡಿರುವುದು ನಮ್ಮ ಹೆಗ್ಗಳಿಕೆ ಎಂದರು.

ಬೈಯ್ಗುಳ ಕೇಳಲೆಂದೇ ಬರ್ತಾರೆ- ಜಾತಿ, ಧರ್ಮ ಭೇದವಿಲ್ಲ
ಜಾತಿ, ಧರ್ಮದ ಭೇದವಿಲ್ಲದೆ ಪಿಲಿನಲಿಕೆಯಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಗ್ರೀನ್‌ ಸ್ಪಾರ್ಕ್‌ ತಂಡದಲ್ಲಿ ಮುಸ್ಲಿಮರೂ ಇದ್ದಾರೆ. ಎಮ್ಮೆಕೆರೆಯ ಆಸಿಫ್‌ ಎಂಬವರು ಪ್ರತೀವರ್ಷ 20 ಲಕ್ಷ ರೂ. ಹಣ ಖರ್ಚು ಮಾಡಿ ದುಬೈಯಿಂದ ಹುಲಿ ವೇಷಧಾರಿಗಳಿಗಾಗಿ ಕುರಿಯ ಶೀಟ್‌ ತರ್ತಾರೆ. ಕಳೆದ ಬಾರಿ ವಿಮಾನದಲ್ಲಿ ತರುತ್ತಿದ್ದಾ ಬಾಂಬೆ ಕಸ್ಟಮ್ಸ್‌ನವರು ಹಿಡಿದಿದ್ದು, ಅವರಿಗೆ 20 ಲಕ್ಷ ರೂ. ನಷ್ಟವಾದರೂ ಮತ್ತೆ 20 ಲಕ್ಷ ರೂ. ಹಣ ಖರ್ಚು ಮಾಡಿದ್ದಾರೆ. ಕಸ್ಟಮ್ಸ್‌ನವರು ಜಪ್ತಿ ಮಾಡಿದ ಸೊತ್ತುಗಳನ್ನು ಮಂಗಳಾದೇವಿಯೇ ಬಿಡಿಸಿಕೊಡುತ್ತಾಳೆ ಎಂಬ ನಂಬಿಕೆಯಿಂದ ಇದ್ದೇನೆ, ಆದ್ದರಿಂದ ನನಗೆ ಖಂಡಿತಾ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾಗಿ ಮಿಥುನ್‌ ಸ್ಮರಿಸಿದರು. ಇನ್ನೊಬ್ಬರು ಸ್ವಯಂಸೇವಕರಾಗಲು ದುಬೈಯಿಂದ ಬಂದು ಗೇಟ್‌ ಕಾದು ಹೋಗುತ್ತಾರೆ. ಅವರು ಹುಲಿಕುಣಿತವನ್ನೂ ನೋಡುವುದಿಲ್ಲ. ಗೇಟಿನಲ್ಲಿ ಅವರು ಬೈಯ್ಗುಳ ಕೇಳಿದ್ರೂ ಬೇಸರಿಸುವುದಿಲ್ಲ. ಪ್ರತೀ ವರ್ಷ ಅವರು ಬೈಯ್ಗುಳ ಕೇಳಲೆಂದೇ ಬರ್ತಾರೆ. ಇದೊಂದು ರೀತಿ ಅವರ ಸೇವೆ ಎಂಂದು ಮಿಥುನ್‌ ರೈ ಸ್ಮರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಶರಣ್‌ ಶೆಟ್ಟಿ, ಗೌರವಸಲಹೆ ಗಾರ ಆನಂದ್‌ ರಾಜ್‌ ಶೆಟ್ಟಿ, ಪ್ರ. ಕಾರ್ಯದರ್ಶಿ ವಿಕಾಸ ಶೆಟ್ಟಿ, ಸದಸ್ಯ ಅನಿಲ್‌ ಪೂಜಾರಿ, ಕೋಶಧಿಕಾರಿ ಅವಿನಾಶ್‌ ಸುವರ್ಣ ಇದ್ದರು.

error: Content is protected !!