ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾ*ವು

ಕಾಸರಗೋಡು: ಕೆರೆಯಲ್ಲಿ ಮುಳುಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬೇಡಡ್ಕ ಸಮೀಪ ಭಾನುವಾರ(ಸೆ.28) ಸಂಜೆ ನಡೆದಿದೆ.

ಕುತ್ತಿಕೋಲು ಪಳ್ಳತುಂಗಲ್‌ನ ಜೇಮ್ಸ್ (58) ಮೃತಪಟ್ಟವರು.

ಕುಟುಂಬಸ್ಥರೊಂದಿಗೆ ಬೇಡಡ್ಕಕ್ಕೆ ಬಂದಿದ್ದ ವೇಳೆ ಸಮೀಪದ ಕೆರೆಯಲ್ಲಿ ಸ್ನಾನಕ್ಕಿಳಿದ ಸಂದರ್ಭ‌ ಈ ಘಟನೆ ನಡೆದಿದೆ.

ಕೆರೆಗಿಳಿದಿದ್ದ ಜೇಮ್ಸ್‌ ಅವರು ಹಲವು ಸಮಯ ಕಳೆದರೂ ಮೇಲಕ್ಕೆ ಬರದ ಹಿನ್ನಲೆಯಲ್ಲಿ ಕುಟುಂಬಸ್ಥರು ಬೊಬ್ಬೆ ಹಾಕಿದಾಗ ಸ್ಥಳೀಯರು ಶೋಧ ನಡೆಸಿ ಮೇಲಕ್ಕೆತ್ತಿ ಆಸ್ಪತ್ರೆಗೆ ಕೊಂಡೊಯ್ದರೂ ಆಗಲೇ ಮೃತಪಟ್ಟಿದ್ದರು.

ಜೇಮ್ಸ್ ಬೇಡಡ್ಕದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದರು. ಬೇಡಡ್ಕ ಠಾಣಾ ಪೊಲೀಸರು ಮಹಜರು ನಡೆಸಿದರು.

error: Content is protected !!