ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿರುವ ಕಿಪ್ಪಿ ಕೀರ್ತಿ ತನ್ನ ಸ್ನೇಹಿತರ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ. ಲವರ್ ಮುತ್ತು ಮತ್ತು ದರ್ಶನ್ ನಂಗೆ ಕುಡಿಯೋಕೆ ಏನೋ ಮಿಕ್ಸ್ ಮಾಡಿಕೊಟ್ಟು ಏನೇನೋ ಫೋಟೋ ತೆಗೆದಿದ್ದಾನೆ. ನನ್ನ ಖಾಸಗಿ ಫೋಟೋ ಇಟ್ಟುಕೊಂಡು ಈಗ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ವೆಬ್ ಮೀಡಿಯಾ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಿಪಿ ಕೀರ್ತಿ, ನನಗೆ ಆತ ಮನೆಗೆ ಕರೆದುಕೊಂಡು ಹೋಗಿ ಡ್ರಿಂಕ್ಸ್ನಲ್ಲಿ ಏನೋ ಮಿಕ್ಸ್ ಮಾಡಿದ್ದು, ಆ ಬಳಿಕ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಹೀಗೆ ಅಂತ ಬೇರೆ ಬೇರೆಯವರು ಹೇಳಿದ್ರು, ಆಮೇಲೆ ಅದು ನನಗೂ ನಿಜ ಅನ್ನಿಸ್ತಿದೆ ಎಂದು ಕಿಪಿ ಹೇಳಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯತಮ ಮುತ್ತು ಹಾಗೂ ಆತನ ಸ್ನೇಹಿತ ದರ್ಶನ್ ಎಂಬಾತನ ವಿರುದ್ಧ ಕಿಪ್ಪಿ ಕೀರ್ತಿ ದೂರು ದಾಖಲಿಸಿದ್ದಾರೆ. ಕಿಪಿ ಕೀರ್ತಿ ದಾಖಲು ಮಾಡಿರುವ ಕೇಸ್ ಇನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಕಿಪ್ಪಿ ಕೀರ್ತಿ ಹಾಗೂ ಸ್ನೇಹಿತರನ್ನು ಠಾಣೆಗೆ ಕರೆಸಿದ ಪೊಲೀಸರು ಮತ್ತೆ ಈ ರೀತಿ ಮಾಡಬೇಡಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.