ಶಾಲಾ ಮೈದಾನದಲ್ಲೇ ಕುಸಿದು ಬಿದ್ದು ಬಾಲಕ ಸಾವು !

ಕಾಸರಗೋಡು: ಶಾಲಾ ಆಟೋಟ ಸ್ಪರ್ಧೆಯ ನಡುವೆ ನಾಲ್ಕನೇ ತರಗತಿ ವಿದ್ಯಾರ್ಥಿ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಕಾಸರಗೋಡಿನ ಮಂಗಲ್ಪಾಡಿ ಜಿ. ಬಿ ಎಲ್. ಪಿ ಶಾಲೆಯಲ್ಲಿ ನಡೆದಿದೆ.

ಹಸನ್ ರಾಝಾ (10) ಶಾಲಾ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟ ಬಾಲಕ. ಆಟೋಟ ಕ್ರೀಡಾ ಚಟುವಟಿಕೆ ಮಧ್ಯೆ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ.

ಈತ ಉತ್ತರ ಪ್ರದೇಶದ ಮುರ್ಷಿದಾಬಾದ್ ನ ಇನ್ಸಾಫಾಲಿ ಎಂಬವರ ಪುತ್ರನಾಗಿದ್ದು, ಉದ್ಯೋಗ ನಿಮಿತ್ತ ಆಗಮಿಸಿದ ವಲಸೆ ಕಾರ್ಮಿಕರ ಮಕ್ಕಳು ಕೇರಳದ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.

error: Content is protected !!