ತೂಕ ಇಳಿಸಲು ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಅಗತ್ಯ ಎಂಬುವುದು ಎಲ್ಲರಿಗೂ ಗೊತ್ತಿದೆ. ಆದರೆ ದಿನನಿತ್ಯದ ಬದುಕಿನಲ್ಲಿ ಸಾಮಾನ್ಯ ತಿಂಡಿಗಳಿಂದಲೇ ತೂಕ ಇಳಿಸಿಕೊಳ್ಳಲು ಸಾಧ್ಯ ಎಂದು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಮತ್ತು ಪೌಷ್ಟಿಕತಜ್ಞ ಆನ್ಯಾ ಪರಾಶರ್ ಹೇಳಿದ್ದಾರೆ. ಪಿಸಿಒಎಸ್‌ನಿಂದ ಬಳಲುತ್ತಿದ್ದ ಇವರು ತಾವು ಅನುಸರಿಸಿದ ತಿಂಡಿಯ ಕ್ರಮದಿಂದ ಒಂದು ವರ್ಷದಲ್ಲಿ 20 ಕೆಜಿ ತೂಕ ಇಳಿಸಿದರು.
ಪಿಸಿಒಎಸ್ ಎಂದರೆ ಅಂಡಾಶಯಗಳಲ್ಲಿ ಕಾಣಿಸುವ ಸಣ್ಣ ಸಿಸ್ಟುಗಳಿಂದಾಗಿ ಪುರುಷ ಹಾರ್ಮೋನ್(ಆಂಡ್ರೋಜನ್) ಹೆಚ್ಚಾಗಿ ತೂಕ ಹೆಚ್ಚಾಗುವುದು ಮುಖದಲ್ಲಿ ಮಡಿಕೆಗಳು, ಕೂದಲಿನ ಹೆಚ್ಚಳ, ಮಾಸಿಕ ಚಕ್ರದಲ್ಲಿ ಅಸಮತೋಲನ, ಸ್ತನಗಳ ಮತ್ತು ಹಾರ್ಮೋನಲ್ ಸಮಸ್ಯೆಗಳು ಉಂಟಾಗಿ ದೇಹದ ಗಾತ್ರ ಒಂದೇ ಸಮನೆ ಹೆಚ್ಚುವುದು.
ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ಸುಲಭ ತಿಂಡಿಗಳ ತೂಕ ಇಳಿಸಲು ಸಾಧ್ಯ ಎಂದು ಇನ್ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರತಿ ದಿನದ ಆರಂಭ ನೀರಿನಿಂದ ಆರಂಭವಾಗುತ್ತದೆ. ಆನಂತರ ಬಾಳೆಹಣ್ಣಿನ ಪ್ರೋಟೀನ್ ಸ್ಮೂದಿ ಉಪಾಹಾರವಾಗಿ ಸೇವಿಸಲಾರಂಭಿಸಿದರು. ಕಚೇರಿಯಲ್ಲಿ ಕಪ್ಪು ಕಾಫಿ ತೆಗೆದುಕೊಂಡು, ಊಟದ ಸಮಯದಲ್ಲಿ ಮೋಸರಿನ ಬಟ್ಟಲು ಮತ್ತು ಬೇಸನ್ ಚೀಲಾ, ಕೆಲವು ಸೌತೆಕಾಯಿ ಹೋಳುಗಳನ್ನು ಸೇವಿಸಿಸಲಾರಂಭಿಸಿದರು. ಸಂಜೆ ಹೊತ್ತಿನಲ್ಲಿ ಹಣ್ಣುಗಳು ಅವರ ಆಹಾರದ ಭಾಗವಾಗುತ್ತಿತ್ತು, ರಾತ್ರಿ ಊಟದಲ್ಲಿ ಸೋಯಾ ಭರ್ಜಿಯೊಂದಿಗೆ ಪ್ರೋಟೀನ್ ಟೋಸ್ಟ್ ಸೇವಿಸಲಾರಂಭಿಸಿ ತೂಕ ಇಳಿಸಿದ್ದಲ್ಲದೆ ಆರೋಗ್ಯವಾಗಿ ಬದಲಾದರು.
ಆನ್ಯಾ ಪರಾಶರ್ 7 ಪ್ರಮುಖ ಆಹಾರ ವಿನಿಮಯಗಳನ್ನು ಹಂಚಿಕೊಂಡಿದ್ದಾರೆ:
ಮ್ಯಾಗಿ ನೂಡಲ್ಸ್ ಬದಲು ತರಕಾರಿ ವರ್ಮಿಸೆಲ್ ಸೇವಿಸುವುದು
ತಂಪು ಪಾನೀಯ ಬದಲು ಮನೆಯಲ್ಲಿ ತಯಾರಿಸಿದ ನಿಂಬೆ ಪಾನಕ
ತಿಂಡಿಗಳಿಗಾಗಿ ಹುರಿದ ಕಡಲೆ ಆಯ್ಕೆ ಮಾಡುವುದು
ಪ್ಯಾಕೇಟ್ ಸೂಪ್ ಬದಲು ಮನೆಯಲ್ಲಿ ತಯಾರಿಸಿದ ತಾಜಾ ತರಕಾರಿ ಸೂಪ್
ಸಂಸ್ಕರಿಸಿದ ಸಕ್ಕರೆ ಬದಲು ಖರ್ಜೂರ ಅಥವಾ ಕೃತಕ ಸಿಹಿಕಾರಕ
2–3 ಘನಗಳ ಡಾರ್ಕ್ ಚಾಕೊಲೇಟ್ಗಳು ಸಿಹಿತಿಂಡಿಗಳ ಪರ್ಯಾಯ
ಬಿಳಿ ಬ್ರೆಡ್ ಬದಲು ಹುಳಿ ಬ್ರೆಡ್
ಆನ್ಯಾ ಪರಾಶರ್ ಪ್ರಸ್ತಾಪಿಸಿದ ಈ ಆಹಾರ ಕ್ರಮಗಳು, ನಿಯಮಿತ ವ್ಯಾಯಾಮದೊಂದಿಗೆ ತೂಕ ಇಳಿಸಲು ಹಾಗೂ ಆರೋಗ್ಯಕರ ಜೀವನಶೈಲಿ ಅಳವಡಿಸಲು ಸಹಾಯಕವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.