ವಿಭಿನ್ನ ವೇಷ ತೊಟ್ಟು ಅನಾರೋಗ್ಯ ಪೀಡಿತರ ನೆರವಿಗೆ ನಿಂತ ಯುವಕರು!

ಮಂಗಳೂರು: ಜೂನಿಯರ್ ಕಟಪಾಡಿ ಖ್ಯಾತಿಯ ಧನಂಜಯ ಪೂಜಾರಿ ಕೃಷ್ಣಾಪುರ ಇವರ ತಂಡ ವೇಷ ತೊಟ್ಟು ಹಣ ಸಂಗ್ರಹಿಸಿ ಅನಾರೋಗ್ಯ ಪೀಡಿತರಿಗೆ ನೀಡುವ ಮೂಲಕ ನೆರವಾಗುತ್ತಿದೆ.

ರವಿ ಕಟಪಾಡಿ ಮಾದರಿ ಹಣ ಸಂಗ್ರಹ

ರವಿ ಉಡುಪಿಯ ರವಿ ಕಟಪಾಡಿಯವರನ್ನೇ ಮಾದರಿಯನ್ನಾಗಿಸಿಮ ಅವರಂತೆಯೇ ವೇಷ ತೊಟ್ಟು ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯ ಪೀಡಿತರಿಗಾಗಿ ಹಣ ಸಂಗ್ರಹಿಸುವ ಕೈಂಕರ್ಯದಲ್ಲಿ ತೊಡಗಿರುವ ಧನಂಜಯ ಪೂಜಾರಿ ಕೃಷ್ಣಾಪುರ ಇವರ ತಂಡ ಈ ಬಾರಿಯೂ ಕೃಷ್ಣಾಪುರ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ವಿಭಿನ್ನ ವೇಷ ತೊಟ್ಟು ಸಾರ್ವಜನಿಕರು ಹಾಗೂ ದಾನಿಗಳ ಸಹಕಾರದಿಂದ ಹಣ ಸಂಗ್ರಹಿಸಿ ಅನಾರೋಗ್ಯ ಪೀಡಿತರಿಗೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವೇಷ ತೊಟ್ಟು ಅನಾರೋಗ್ಯ ಪೀಡಿತರ ನೇರವಿಗೆ ಸ್ಪಂದಿಸಿದ ಕೀರ್ತಿ ಜೂನಿಯರ್ ಕಟಪಾಡಿ ಖ್ಯಾತಿಯ ಧನಂಜಯ ಪೂಜಾರಿ ಕೃಷ್ಣಾಪುರ ಇವರ ತಂಡಕ್ಕೆ ಸಲ್ಲುತ್ತದೆ. ಕಳೆದ 4 ವರ್ಷದಲ್ಲಿ ಓಟ್ಟು 2,23,541/-ರೂ ಹಣವನ್ನು ತಂಡ ಸಂಗ್ರಹಿಸಿದೆ. ಪ್ರತೀವರ್ಷ ಕೃಷ್ಣಾಪುರ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ವಿಭಿನ್ನ ವೇಷ ತೊಟ್ಟು ಪಾಲ್ಗೊಂಡು ಹಣ ಸಂಗ್ರಹ ನಡೆಸುತ್ತಿದೆ.

ಪ್ರಥಮ ವರ್ಷದಲ್ಲಿ 34000/-ರೂ ಸಂಗ್ರಹವಾಗಿದ್ದು, ಈ ಹಣವನ್ನು 3 ಅನಾರೋಗ್ಯ ಪೀಡಿತರಿಗೆ ನೀಡಲಾಗಿದೆ. ಅದೇ ರೀತಿ ದ್ವಿತೀಯ ವರ್ಷದಲ್ಲಿ ಸಂಗ್ರಹವಾದ 57841/-ರೂ ಹಣವನ್ನು 4 ಮಂದಿ ಅನಾರೋಗ್ಯ ಪೀಡಿತರಿಗೆ, ಮೂರನೆ ವರ್ಷದಲ್ಲಿ ಸಂಗ್ರಹವಾದ 59000/-ರೂ ಹಣವನ್ನು 5 ಅನಾರೋಗ್ಯ ಪೀಡಿತರಿಗೆ ಹಾಗೂ ನಾಲ್ಕನೆ ವರ್ಷದಲ್ಲಿ ಸಂಗ್ರಹವಾದ 72700/-ರೂ ಹಣವನ್ನು 6 ಮಂದಿ ಅನಾರೋಗ್ಯ ಪೀಡಿತರಿಗೆ ನೀಡುವ ಮೂಲಕ ನೆರವಾಗಿದೆ.

error: Content is protected !!