ಮಂಗಳೂರು: ನಂತೂರು-ಕೆಪಿಟಿ ಹೆದ್ದಾರಿಯಲ್ಲಿ ಸಂಭವಿಸಿದ ಘಟನೆಯಲ್ಲಿ ಸ್ಕೂಟರ್ ಗುಂಡಿಗೆ ಬಿದ್ದರೂ ಸವಾರ ಮತ್ತು ಸ್ಕೂಟರ್‌ನ ಹಿಂದೆ ಕುಳಿತಿದ್ದ ಮಹಿಳೆ ಅದೃಷ್ಟವಶಾತ್ ಗಾಯಗೊಳ್ಳದೆ ಪಾರಾಗಿದ್ದಾರೆ.
ನಂತೂರು ಜಂಕ್ಷನ್ ಬಳಿ ಘಟನೆ ಸಂಭವಿಸಿದ್ದು, ರಸ್ತೆಯ ಬಲಭಾಗದಲ್ಲಿ ಸಾಗುತ್ತಿದ್ದ ಸ್ಕೂಟರ್ ನ ಚಕ್ರಗಳು ರಸ್ತೆಯಲ್ಲಿದ್ದ ಗುಂಡಿಗೆ ಸಿಲುಕಿ ಸ್ಕೂಟರ್ ಹಠಾತ್ತನೆ ತಿರುಗಿ ನಿಂತಿದೆ. ಹಿಂದೆ ಯಾವುದೇ ವಾಹನಗಳಿರದಿದ್ದುದು ಮತ್ತು ಸವಾರನ ಚಾಕಚಕ್ಯತೆಯಿಂದಾಗಿ ದೊಡ್ಡ ಅಪಘಾತ ತಪ್ಪಿದೆ.
ಸ್ಕೂಟರ್ ರಸ್ತೆಗೆ ಬೀಳದಂತೆ ಸವಾರನು ನಿಯಂತ್ರಿಸಿದ್ದಾನೆ. ಈ ಘಟನೆಯ ದೃಶ್ಯವು ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ.