ಗುಡಿಬಂಡೆ: ಯುವಕನೊಬ್ಬ ಕೆರೆಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ತೀಲಕುಂಟಹಳ್ಳಿ ಗ್ರಾಮದ ಚಿಕ್ಕಕೆರೆಯಲ್ಲಿ ಇಂದು(ಸೆ.19) ನಡೆದಿದೆ.
ಮೂಲತಃ ದೇವನಹಳ್ಳಿ ತಾಲೂಕಿನ ವಿಜಯಪುರ ಗ್ರಾಮದ ನವೀನ್ (29) ಕೆರೆಗೆ ಬಿದ್ದು ಮೃತಪಟ್ಟ ವ್ಯಕ್ತಿ.
ನವೀನ್ ವಿಜಯಪುರ ಗ್ರಾಮದಲ್ಲೇ ಜೆಲ್ಲಿ ಕ್ರಷರ್ ಅಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಕೆರೆಯ ಬಳಿಗೆ ಏಕೆ ಬಂದಿದ್ದ, ಹೇಗೆ ಬಿದ್ದ ಎಂಬುದು ಇನ್ನು ತಿಳಿದುಬಂದಿಲ್ಲ.
ಪೆರೇಸಂದ್ರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಗುಡಿಬಂಡೆ ಅಗ್ನಿಶಾಮಕ ದಳದ ಸಿಬ್ಬಂದಿ ನವೀನ್ ಗಾಗಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದು, ಸತತ ಹುಡುಕಾಟದ ನಂತರ ಮದ್ಯಾಹ್ನ ಸುಮಾರು 2 ಗಂಟೆಗೆ ಯುವಕನ ಶವ ಪತ್ತೆಯಾಗಿದೆ.