ನೆತ್ತರಕೆರೆಯಲ್ಲಿ ನಾಯಿಯ ಬಡಿದು ಕೊಲೆ: ದೂರು

ಬಂಟ್ವಾಳ : ಸಾಕು ನಾಯಿಯನ್ನು ನೆರೆಮನೆಯ ವ್ಯಕ್ತಿಗಳಿಬ್ಬರು ಬಡಿದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ನೆತ್ತರಕೆರೆ ಮಹಿಳೆಯೊಬ್ಬರು ತನ್ನ ನೆರೆ ಮನೆ ನಿವಾಸಿಗಳ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಳ್ಳಿಗೆ ಗ್ರಾಮದ ನೆತ್ತರಕೆರೆ ನಿವಾಸಿ, ಡೋಲ್ಫಿ ಡಿ’ಸೋಜ ತನ್ನ ನೆರೆ ಮನೆಯವರಾದ ಯತಿನ್ ಪೂಜಾರಿ ಹಾಗೂ ಯಶಿನ್ ಪೂಜಾರಿ ವಿರುದ್ಧ ದೂರು ನೀಡಿದ್ದಾರೆ.

ನಾವು ಸಾಕುತ್ತಿದ್ದ ನಾಯಿ ದಾರಿ ತಪ್ಪಿ ನೆರೆಮನೆಗೆ ಹೋಗಿತ್ತು. ಸೆ.17 ರಂದು ಬೆಳಿಗ್ಗೆ ಸಾರ್ವಜನಿಕ ಸ್ಥಳದಲ್ಲಿ ನಾಯಿಯನ್ನು ದೊಣ್ಣೆಯಿಂದ ಬಡಿದು ಸಾಯಿಸಿ ಅಲ್ಲಿಯೇ ಗುಂಡಿ ಅಗೆದು ಹೂತು ಹಾಕಿದ್ದಾರೆ. ಸೆ.18 ರಂದು ಬೆಳಿಗ್ಗೆ ನಾಯಿಯನ್ನು ಹುಡುಕಿಕೊಂಡು ಹೋದಾಗ ನಾಯಿಯನ್ನು ಕೊಂದಿರುವುದು ಬೆಳಕಿಗೆ ಬಂದಿದೆ. ಇದು ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧವಾಗಿದ್ದು, ಈ ಹೇಯ ಕೃತ್ಯದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹಿಳೆ ದೂರಿನಲ್ಲಿ ವಿನಂತಿಸಿದ್ದಾರೆ.

error: Content is protected !!