ಹತ್ತನೇ ಕ್ಲಾಸ್‌ ಹುಡುಗಿ ಸುಸೈಡ್!

ಕಾಸರಗೋಡು: 10ನೇ ತರಗತಿ ಓದುತ್ತಿರುವ ವಿಧ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಂದಡ್ಕದಲ್ಲಿ ನಡೆದಿದೆ. ಕುಂಡಂಗುಳಿ ಸರಕಾರಿ ಹೈಯರ್‌ ಸೆಕಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ದೇವಕಿ (16) ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಂದಡ್ಕ ಗ್ರಾಮೀಣ ಬ್ಯಾಂಕಿನ ಬಳಿಯಲ್ಲಿ ಗಂಜಿ ಕ್ಯಾಂಟೀನ್‌ ನಡೆಸುವ ಸಾವಿತ್ರಿ ಅವರ ಪುತ್ರಿಯಾಗಿರುವ ದೇವಕಿಯು ಬಾಲಸಂಘದ ಬಂದಡ್ಕ ಗ್ರಾಮೀಣ ಘಟಕದ ಅಧ್ಯಕ್ಷೆಯಾಗಿದ್ದು ಕ್ರಿಯಾಶೀಲ ಹುಡುಗಿ ಎನಿಸಿದ್ದರು. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.

ದೇವಕಿ ಅವರ ತಂದೆ ಸತೀಶ್ ನಾಲ್ಕು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸ್ ಮಾಹಿತಿ ಪ್ರಕಾರ ದೇವಿಕಾಗೆ ಬೈಪೋಲಾರ್ ಡಿಸಾರ್ಡರ್ ಇರುವುದು ಪತ್ತೆಯಾಗಿದ್ದು, ಕಾಞಂಗಾಡ್‌ನ ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು.

error: Content is protected !!