ಕಾಸರಗೋಡು: ಡೇಟಿಂಗ್ ಆ್ಯಪ್ ಮೂಲಕ ಪರಿಚಯಗೊಂಡ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ 16 ವರ್ಷದ ಬಾಲಕನಿಗೆ ನಿರಂತರ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಚೈಲ್ಡ್ ಲೈನ್ ವರದಿಯ ಪ್ರಕಾರ 14 ಮಂದಿಯ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿಕ್ಷಣ ಇಲಾಖೆಯ ಓರ್ವ ಅಧಿಕಾರಿ, ಆರ್‌ಪಿಎಫ್ ಅಧಿಕಾರಿ ಮತ್ತು ಯೂತ್ ಲೀಗ್ ಮುಖಂಡನ ಸಹಿತ ಹಲವರು ಆರೋಪಿಗಳಾಗಿದ್ದಾರೆ. 8 ಮಂದಿಯನ್ನು ಬಂಧಿಸಲಾಗಿದ್ದು, ಉಳಿದವರು ತಲೆ ಮರೆಸಿಕೊಂಡಿದ್ದಾರೆ.
ಮೂರು ದಿನಗಳ ಹಿಂದೆ ಅಪರಿಚಿತ ವ್ಯಕ್ತಿ ಮನೆಯಿಂದ ಓಡಿ ಹೋಗುತ್ತಿರುವುದನ್ನು ಕಂಡ ಬಾಲಕನ ತಾಯಿ ಚೈಲ್ಡ್ ಲೈನ್ ಅಧಿಕೃತರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ವೆಳ್ಳರಿಕುಂಡ್, ಚಿಮೇನಿ, ನೀಲೇಶ್ವರ, ಚಿತ್ತಾರಿಕಲ್, ಚಂದೇರ ಠಾಣೆಗಳಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿವೆ. ಆರೋಪಿಗಳಲ್ಲಿ 5 ಮಂದಿ ಕಣ್ಣೂರು, ಕೋಯಿಕ್ಕೋಡು ಜಿಲ್ಲೆಯವರಾಗಿದ್ದಾರೆ.