ಕೆನರಾ ಸಂಸ್ಥೆಯಿಂದ ಇಸ್ರೋ ವಿಜ್ಞಾನಿ ಸುಮನ್ ವಾಲ್ಕೆಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು: ಕೆನರಾ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಮತ್ತು ಇಸ್ರೋ ವಿಜ್ಞಾನಿಯಾದ ಶ್ರೀಮತಿ ಸುಮನ್ ಆರ್. ವಾಲ್ಕೆ ಅವರು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕೆನರಾದ ಹೆಮ್ಮಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಮಂಗಳೂರು ದಕ್ಷಿಣದ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಅವರು ಈ ಸನ್ಮಾನವನ್ನು ನಡೆಸಿದ್ದು ಶ್ರೀಮತಿ ವಾಲ್ಕೆಯವರನ್ನು ಮರಳಿ ಈ ಸಂಸ್ಥೆಯಡಿ ಸನ್ಮಾನಿಸಲು ಹೆಮ್ಮೆಯಾಗುತ್ತದೆ ಎಂದರು.

ಇದೇ ವೇಳೆ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಮತ್ತು ದಿ ಕೋಸ್ಟಲ್ ಆಸ್ಟ್ರೋನಮಿ ಗ್ರೂಪ್ ಜಂಟಿಯಾಗಿ ಆಯೋಜಿಸಿದ ಉಪಗ್ರಹ ಸಂವಹನ ಕಾರ್ಯಾಗಾರದಲ್ಲಿ, ಉಪಗ್ರಹ ಅಮೆಚೂರ್ ರೇಡಿಯೋ ಕ್ಲಬ್‌ನ ಸಹ ವಿಜ್ಞಾನಿಗಳಾದ ಡಾ. ರಾಹುಲ್ ವಾಘ್ಮರೆ, ಶ್ರೀ ಮೋಹನ್ ಮತ್ತು ಶ್ರೀಮತಿ ಶ್ವೇತಾ ಅವರ ವಿಶೇಷ ಕೊಡುಗೆಗಳಿಗಾಗಿ ಸನ್ಮಾನಿಸಲಾಯಿತು.
ಈ ನಮ್ಮ ಎಲ್ಲಾ ವಿಜ್ಞಾನಿಗಳ ಸಾಧನೆಗಳು ಕೆನರಾ ಸಮಾಜಕ್ಕೆ ಹೆಮ್ಮೆ ಮತ್ತು ಸ್ಫೂರ್ತಿಯಾಗಿದೆ. ಇಂದಿನ ಈ ಕಾರ್ಯಕ್ರಮವು ಸದಾ ಸ್ಮರಣೀಯವಾಗಿದ್ದು, ಸಮರ್ಪಣೆ ಮತ್ತು ಪರಿಶ್ರಮದಿಂದ, ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನು ಏರಿರುವುದು ಭವಿಷ್ಯದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.

ಈ ಸಂದರ್ಭದಲ್ಲಿ ಕೆನರಾ ಪ್ರೌಢಶಾಲಾ ಸಂಘದ ಗೌರವ ಕಾರ್ಯದರ್ಶಿ ಶ್ರೀ ರಂಗನಾಥ್ ಭಟ್, ಕೆನರಾ ವಿಕಾಸ್ ಸಂಸ್ಥೆಗಳ ಸಂಯೋಜಕರಾದ ಶ್ರೀ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ನಂದಗೋಕುಲ ಮತ್ತು ಕೆನರಾ ಅಂತರರಾಷ್ಟ್ರೀಯ ಶಾಲೆಯ ಸಂಚಾಲಕರಾದ ಶ್ರೀ ನರೇಶ್ ಶೆಣೈ, ಕೆನರಾ ಪ್ರೌಢಶಾಲೆ (ಮುಖ್ಯ) ಸಂಚಾಲಕರಾದ ಶ್ರೀಮತಿ ಅಶ್ವಿನಿ ಕಾಮತ್, ಕೆನರಾ ಪಿಯು ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಲತಾ ಮಹೇಶ್ವರಿ ಹಾಗೂ ಕೋಸ್ಟಲ್ ಆಸ್ಟ್ರಾನೋಮಿ ಕ್ಲಬ್ ನ ಶ್ರೀ ಅಶ್ವಿನ್ ಶೆಣೈ ಕೂಡ ಉಪಸ್ಥಿತರಿದ್ದರು.

error: Content is protected !!