ಉತ್ತರಪ್ರದೇಶ: ಬಾಲಿವುಡ್ ನಟಿ ದಿಶಾ ಪಟಾನಿ ಅವರ ಬರೇಲಿಯ ನಿವಾಸದ ಮೇಲೆ ಶುಕ್ರವಾರ ಬೆಳಗಿನ ಜಾವ 3.30ರ ಸುಮಾರಿಗೆ ಮುಸುಕುಧಾರಿಗಳ ಗುಂಪು ಗುಂಡಿನ ದಾಳಿ ನಡೆಸಿದೆ.
ಘಟನೆಯ ವೇಳೆ ನಟಿಯ ತಂದೆ ಜಗದೀಶ್ ಪಟಾನಿ ಹಾಗೂ ಮನೆಯ ಕೆಲ ಸದಸ್ಯರು ಮನೆಯಲ್ಲಿದ್ದರು. ಗುಂಡಿನ ಸದ್ದಿಗೆ ನಿದ್ದೆಯಲ್ಲಿದ್ದ ಮನೆಮಂದಿ ಎದ್ದು ಹೊರಬಂದಿದ್ದಾರೆ. ಆ ಕೂಡಲೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಗಾಬರಿಗೊಂಡ ಮನೆಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪರಿಶೀಲಿಸಿ ಆರೋಪಿಗಳ ಪತ್ತೆಗೆ ಘಟನೆಯ ದೃಶ್ಯಾವಳಿಗಳನ್ನು ಸಿಸಿಟಿವಿ ಯಲ್ಲಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದೇವೆ ಮತ್ತು ನಟಿಯ ಮನೆಯ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ವೀರೇಂದ್ರ ಚರಣ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಅದರಲ್ಲಿ ನಾವು ಉತ್ತರ ಪ್ರದೇಶದ ಬರೇಲಿಯಲ್ಲಿರುವ ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿಯನ್ನು ನಾವೇ ನಡೆಸಿದ್ದು ಕಾರಣ ನಟಿ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಇದು ಕೇವಲ ಟ್ರೈಲರ್ ಅಷ್ಟೇ ಮುಂದಿನ ದಿನಗಳಲ್ಲಿ ನಟಿ ಸೇರಿದಂತೆ ಬೇರೆ ಯಾರೇ ಹಿಂದೂ ದೇವರನ್ನು ಜೊತೆಗೆ ಸನಾತನ ಧರ್ಮವನ್ನು ಅವಮಾನಿಸಿದರೆ ಮನೆ ಮಂದಿ ಯಾರೂ ಜೀವಂತವಾಗಿ ಉಳಿಯುವುದಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ ಹಾಗೂ ದಾಳಿಯ ಹೊಣೆಯನ್ನು ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋದಾರ ಹೊತ್ತುಕೊಂಡಿದ್ದಾರೆ.