ಸರ್ಕಾರಿ ಶಾಲೆಗೆ ಹೊಸ ಹುಟ್ಟು ನೀಡಿದ ಶಿವರಾಜ ತಂಗಡಗಿ ತಾಯಿ ಹುಲಿಗೆಮ್ಮ

ಕೊಪ್ಪಳ: ನಾನಂತೂ ಅಕ್ಷರ ಕಲಿಯಲಿಲ್ಲ, ಸರ್ಕಾರಿ ಶಾಲೆಯ ಮಕ್ಕಳಾದರೂ ಅಕ್ಷರ ಕಲಿತು ಅವರ ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಶಿವರಾಜ ತಂಗಡಗಿ ಅವರ ತಾಯಿ ಹುಲಿಗೆಮ್ಮ ತಂಗಡಗಿ ಕನಕಗಿರಿ ಕ್ಷೇತ್ರದ ಆದಾಪುರ ಗ್ರಾಮ ಸರ್ಕಾರಿ ಶಾಲೆಗೆ 1 ಎಕರೆ ಭೂದಾನ ಮಾಡಿ ಮಾದರಿಯಾಗಿದ್ದಾರೆ.

ಜಿಲ್ಲೆಯ ಕನಕಗಿರಿ ಕ್ಷೇತ್ರದ ಆದಾಪೂರ ಗ್ರಾಮದಲ್ಲಿ 1ರಿಂದ 7ನೇ ತರಗತಿವರೆಗೂ ಸರ್ಕಾರಿ ಶಾಲೆ ಇದೆ. ಆದರೆ, ಎರಡೇ ಕೊಠಡಿಗಳಿವೆ. ಜಾಗವೇ ಇಲ್ಲ. ಇದರಿಂದ 120 ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ತೊಂದರೆ ಎದುರಿಸುತ್ತಿದ್ದರು. ನವಲಿ ಹೋಬಳಿ ಆದಾಪುರ ಗ್ರಾಮದ ಸರ್ವೇ ನಂ.86/1/9ರಲ್ಲಿ 1 ಎಕರೆ ಭೂಮಿ ಖರೀದಿಸಿ ಶಾಲೆಗೆ ಭೂಮಿ ದಾನ ಮಾಡಿದ್ದಾರೆ.

ಜ.30ರಂದು ತಮ್ಮ ಇಳಿ ವಯಸ್ಸಿನಲ್ಲಿಯೂ ಕಾರಟಗಿಯ ಉಪ ನೋಂದಣಿ ಕಚೇರಿಗೆ ಆಗಮಿಸಿದ ಹುಲಿಗೆಮ್ಮ ತಮ್ಮ ಹೆಸರಲ್ಲಿದ್ದ ಜಮೀನನ್ನು ಕಾನೂನು ಬದ್ದವಾಗಿ ಅಧಿಕೃತವಾಗಿ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ಅಲ್ಲದೆ, ಅದರ ಪ್ರತಿಯನ್ನು ಗಂಗಾವತಿ ಬಿಇಒಗೆ ಹಸ್ತಾಂತರಿಸಿದ್ದಾರೆ.

error: Content is protected !!