ಬಂಗ್ಲಗುಡ್ಡ ಮಹಜರು ವೇಳೆ ರಾಶಿ ರಾಶಿ ಹೆಣಗಳ ಅವಶೇಷ ನೋಡಿದ್ದೇನೆ: ಸೌಜನ್ಯ ಮಾವ ವಿಠಲ್ ಗೌಡ ಸ್ಫೋಟಕ ಹೇಳಿಕೆ

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆಗೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ಆಗ ಅಲ್ಲಿ ಮೂರು ಮನುಷ್ಯರ ಕಳೆಬರಹಗಳು ಸಿಕ್ಕಿದೆ ಎಂದು ಮೃತ ಸೌಜನ್ಯ ಮಾವ ವಿಠಲ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ವಿಡಿಯೋ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ ಅವರು,  ಹತ್ತಿರ ಹತ್ತಿರ ಹತ್ತು ಫೀಟ್ ಗಳಲ್ಲೇ ಈ ಅವಶೇಷಗಳು ಸಿಕ್ಕಿದೆ. ಇನ್ನು ಎರಡನೇ ಬಾರಿಗೆ ಸ್ಥಳ ಮಹಜರಿಗೆ ಹೋದಾಗ ಹೆಣಗಳ ಅವಶೇಷಗಳ ರಾಶಿ ಸಿಕ್ಕಿದೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅದ್ರಲ್ಲಿ ಮೇಲ್ನೋಟಕ್ಕೆ ಮಗುವಿನ ಅವಶೇಷಗಳು, ವಾಮಾಚಾರಕ್ಕೆ ಬಳಸುವ ವಸ್ತುಗಳು ಕೂಡಾ ಸಿಕ್ಕಿದೆ ಎಂದ ಅವರು ಹೂತಿಟ್ಟ ಶವಗಳನ್ನು ಕಾಣದ ಹಾಗೇ ಮಾಡಲು ಮಣ್ಣು ತೆಗೆದು ಹಾಕಿದ ಹಾಗೇ ಕಾಣುತ್ತಿತ್ತು ಎಂದಿದ್ದಾರೆ.

ಕಳೆಬರಹಗಳು ಅಲ್ಲಲ್ಲಿ ಇತ್ತು, ಬುರುಡೆಗಳು ಮಣ್ಣಲ್ಲಿ ಎದ್ದು ಕಾಣ್ತಿತ್ತು, ನೋಡಿದ ಬುರುಡೆಗಳು ಹಾಗೆ ಇದೆ ಅದನ್ನು ಮುಟ್ಟಿಲ್ಲ ಎಂದು ಹೇಳಿದ್ದಾರೆ.  ತನಿಖೆಗೆ ಯಾವಾಗ ಕರೆದರೂ ಬರ್ತೇನೆ, ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಎಸ್ಐಟಿ ಅಧಿಕಾರಿಗಳು ಯೂಟ್ಯೂಬರ್ ಗಳನ್ನು ಮತ್ತು ಅಲ್ಲಿನ ಹೋರಾಟಗಾರರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ತಲೆಬುರುಡೆಯನ್ನು ಇದೇ ಬಂಗ್ಲೆಗುಡ್ಡೆ ಕಾಡಿನಿಂದ ವಿಠಲ ಗೌಡ ದೂರುದಾರ ಚಿನ್ನಯ್ಯನಿಗೆ ತಂದುಕೊಟ್ಟಿದ್ದಾಗಿ ಹೇಳಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ವಿಠಲ ಗೌಡರನ್ನು ಎಸ್ಐಟಿ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಲ್ಲದೆ, ಬಂಗ್ಲೆಗುಡ್ಡೆ ಕಾಡಿಗೆ ಕರೆದೊಯ್ದು ಮಹಜರು ನಡೆಸಿದ್ದಾರೆ.  ಪ್ರಕರಣ ಕುತೂಹಲ ಮೂಡಿಸಿದೆ.

error: Content is protected !!