ಮಂಗಳೂರು: ಸೆ.29ರಿಂದ ಅ.1ರವರೆಗೆ ಬಜ್ಪೆ ಕೇಂದ್ರ ಮೈದಾನದ ”ಶ್ರೀ ಶಕ್ತಿ ಮಂಟಪ” ದಲ್ಲಿ 33ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಲೋಕೇಶ್ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಅನಂತ ಪದ್ಮನಾಭ ಆಚಾರ್ಯ, ಶಿಬರೂರು ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಸಾರ್ವಜನಿಕರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿದ್ಯಾಮಾತೆ ಶ್ರೀ ಶಾರದಾಂಬೆಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿ, ಸಿರಿಮುಡಿ ಗಂಧ- ಪ್ರಸಾದವನ್ನು ಸ್ವೀಕರಿಸಿ, ತನು-ಮನ-ಧನಗಳಿಂದ ಸಹಕರಿಸಿ ಈ ಉತ್ಸವವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಶಾರದೋತ್ಸವ ಸಮಿತಿ ವಿನಂತಿಸಿದೆ.