ಮಂಗಳೂರು: ರೋಟರಿ ಕ್ಲಬ್ ಮಣಿಪಾಲ ಹಿಲ್ಸ್ ನವರು ಸೋಮವಾರ(ಸೆ.8) ರಂದು ರೋಟರಿ ಸಭಾಂಗಣ ಮಣ್ಣಪಳ್ಳ ದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅವರ ಕ್ಲಬ್ ಗೆ ಸೇರಿರುವ 6 ಸಮುದಾಯ ದಳಗಳಾದ ಆದರ್ಶ ನಗರ, ಪ್ರಗತಿ ನಗರ, ಬ್ರಾಮರಿ, ನೇತಾಜಿ ನಗರ, ಮಂಚಿಕೋಡಿ, ಧೂಮವತಿ ಸಮುದಾಯದಳದ ಸದಸ್ಯರ 1 ರಿಂದ 6 ವರ್ಷದ ಮಕ್ಕಳಿಗಾಗಿ ಮುದ್ದು ಕೃಷ್ಣ ಸ್ಪರ್ಧೆ ಏರ್ಪಡಿಸಿದ್ದರು. ಹಾಗೇನೇ ಈ ಸಮುದಾಯದಳಕ್ಕೆ ಸೇರಿದ್ದ 6 ಅಂಗನವಾಡಿ ಶಿಕ್ಷಕಿಯರಿಗೆ ಮತ್ತು ರೋಟರಿ ಕ್ಲಬ್ ನ ಇಬ್ಬರು ಶಿಕ್ಷಕ ಸದಸ್ಯರಿಗೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಮಣಿಪಾಲ ಹಿಲ್ಸ್ ನ ಅಧ್ಯಕ್ಷರು ರೋಟರಿಯನ್ ಸುರೇಶ ರೈ ಅವರು ಸ್ವಾಗತ ಭಾಷಣ ಮಾಡುವ ಮೂಲಕ ಪ್ರಾರಂಭಿಸಿದರು. ಕಾರ್ಯಕ್ರಮದ ಉದ್ಘಾಟನೆ ರೋಟರಿಯನ್ ವಲಯ ಸೇನಾನಿ ಜನಾರ್ಧನ್ ಭಟ್ ಅವರು ನಡೆಸಿಕೊಟ್ಟರು.
ಮುಖ್ಯ ಅತಿಥಿಯಾದ ಶ್ರೀಮತಿ ಜ್ಯೋತಿ ಸರ್ವೋದೆಯವರು ಬಹುಮಾನ ವಿತರಣೆ ಮಾಡಿದರು. ಕಾರ್ಯಕ್ರಮದ ನಿರೂಪಣೆ ಯನ್ನು ಕ್ಲಬ್ ನ ಕಾರ್ಯದರ್ಶಿ ರೋಟರಿಯನ್ ಶ್ರೀಲತಾ ಮೈಯ ನಡೆಸಿಕೊಟ್ಟರು. ಪ್ರಾರ್ಥನೆಯನ್ನು ರೋಟರಿಯನ್ ಗೀತಾ ಸುರೇಶ ರೈ, ರೋಟರಿಯನ್ ಶ್ರೀಲತಾ ಮೈಯ ಹಾಗೂ ರೋಟರಿಯನ್ ಜಾಹ್ನವಿ ಬಂಗೇರ ಮಾಡಿದರು.
ಇದೇ ಸಂದರ್ಭದಲ್ಲಿ ಸಮುದಾಯದಳದ ಸದಸ್ಯರು ಸುಂದರವಾದ ನೃತ್ಯ ಪ್ರದರ್ಶನ ಮಾಡಿದರು. ಸ್ಪರ್ಧೆಯ ತೀರ್ಪುಗಾರರು ರೋಟರಿಯನ್ ಮಾಲತಿ ರಾವ್, ರೋಟರಿಯನ್ ವಂದನಾ ರಾವ್, ರೋಟರಿಯನ್ ಮಾಧವ ಮೈಯ.