ಮಂಗಳೂರು: ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದೆ ಎಂದು ಅವರು ಇಂದು ಸೂರಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಬರೂರು ದೇಲಂತಬೆಟ್ಟುವಿನ ವಿವಿಧ ರಸ್ತೆಗಳ ಕಾಂಕ್ರೀಟೀಕರಣಕ್ಕೆ ಎಂ.ಅರ್.ಪಿ.ಎಲ್ ಸಂಸ್ಥೆಯ ಸಿ.ಇ.ಅರ್ ವಿಭಾಗದಿಂದ ಸಮಾರು 60 ಲಕ್ಷ ಅನುದಾನ ಮಂಜೂರುಗೊಂಡಿದ್ದು ಅದರ ಶಿಲಾನ್ಯಾಸ ನೆರವೇರಿಸಿ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ನುಡಿದರು. ಎಂ.ಅರ್.ಪಿ.ಎಲ್ ಸಂಸ್ಥೆಯು ತನ್ನ ಸುತ್ತಲಿನ ಗ್ರಾಮ ಪಂಚಾಯತ್ ನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿದ್ದು ಆ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಅದಕ್ಕಾಗಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಸೂರಿಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋಪಾಲ್ ಕುಲಾಲ್,ಮಾಜಿ ಅಧ್ಯಕ್ಷರಾದ ಜೀತೆಂದ್ರ ಶೆಟ್ಟಿ, ಸಿಂಧೂ,ಜಯಂತ್ ಸಾಲ್ಯಾನ್ ತೋಕೂರು,ಗುತ್ತಿನಾರ್ ಉಮೇಶ್ ಶೆಟ್ಟಿ ಶಿಬರೂರು, ಜಿಲ್ಲಾ ಪಂಚಾಯತ್ ಇಂಜಿನಿಯರ್ ಪ್ರಶಾಂತ್ ಅಳ್ವ,ಜಗದೀಶ್ ಶೆಟ್ಟಿ ಪರ್ಲಬೈಲ್,ಸುಮನ್ ಶೆಟ್ಟಿ, ದೇವಿಕಿರಣ್ ಶಿಬರೂರು,ಪುರಂದರ ಭಂಗಾವು,ಬಾಲಕೃಷ್ಣ ಎಂ ಕೈಯೂರ್,ಪ್ರವೇಣ್ ಶೆಟ್ಟಿ ಪಡುಮನೆ,ದುರ್ಗದಾಸ್ ಶೆಟ್ಟಿ ಪಡುಮನೆ,ಸುಂದರ ಶೇರಿಗಾರ್,ಲಲಿತಾ ಕೋಟ್ಯಾನ್, ಶಾಂಭವಿ,ವಿದ್ಯಾಲಕ್ಷ್ಮಣ,ವೆಂಕಟ್ರಮನ್ ಅಚಾರ್ಯ,ಗುತ್ತಿಗೆದಾರ ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.