ದುಬಾೖ: ಹಾಲಿ ಚಾಂಪಿಯನ್ ಖ್ಯಾತಿಯ, ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ಇಂದು(ಸೆ.10) ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಯಲ್ಲಿ “ಆತಿಥೇಯ’ ಯುಎಇಯನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಆರಂಭವಾಗಲಿದೆ. ಪಂದ್ಯ ಪ್ರಾರಂಭವಾಗುವ ಅರ್ಧ ಗಂಟೆ ಮೊದಲು ಅಂದರೆ ಸಂಜೆ 7:30 ಕ್ಕೆ ಟಾಸ್ ನಡೆಯಲಿದ್ದು, ಈ ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಳೆದ ಸಲದ ಏಕದಿನ ಮಾದರಿಯ ಏಷ್ಯಾ ಕಪ್ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾವನ್ನು 50 ರನ್ನಿಗೆ ಉಡಾಯಿಸಿದ ಭಾರತ ವಿಕೆಟ್ ನಷ್ಟವಿಲ್ಲದೆ ಗೆದ್ದು ಬಂದಿತ್ತು. ಆಗ ರೋಹಿತ್ ಶರ್ಮ ನಾಯಕರಾಗಿದ್ದರು. ಆದರೆ ಈ ಬಾರಿ ಕೇವಲ ರೋಹಿತ್ ಮಾತ್ರವಲ್ಲ, ಕೊಹ್ಲಿ, ರಾಹುಲ್, ಇಶಾನ್ ಕಿಶನ್, ಜಡೇಜ, ವಾಷಿಂಗ್ಟನ್ ಸುಂದರ್, ಸಿರಾಜ್ ಮೊದಲಾದ ಆಟಗಾರರಿಲ್ಲ. ಐಪಿಎಲ್‌ನಲ್ಲಿ ಮಿಂಚಿದ ಯುವ ಪಡೆಯನ್ನು ಹೊಂದಿದೆ. ಬಹುಮುಖ ಪ್ರತಿಭೆಯುಳ್ಳ ಆಟಗಾರರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅಂತಿಮ ಹನ್ನೊಂದರ ಆಯ್ಕೆ ಜಟಿಲಗೊಂಡಿದೆ ಎಂದೇ ಹೇಳಬೇಕಾಗುತ್ತದೆ.
ಭಾರತ ತಂಡದ ಆಟಗಾರರು: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಹರ್ಷಿತ್ ಸಿಂಗ್, ಜರುನ್.
ಯುಎಇ ತಂಡದ ಆಟಗಾರರು: ಮುಹಮ್ಮದ್ ವಾಸಿಮ್ (ನಾಯಕ), ಅಲಿಶನ್ ಶರಾಫು, ಆರ್ಯನ್ಶ್ ಶರ್ಮಾ (ವಿಕೆಟ್ ಕೀಪರ್), ಆಸಿಫ್ ಖಾನ್, ಧ್ರುವ ಪರಾಶರ್, ಎಥಾನ್ ಡಿ ಸೋಜಾ, ಹೈದರ್ ಅಲಿ, ಹರ್ಷಿತ್ ಕೌಶಿಕ್, ಜುನೈದ್ ಸಿದ್ದಿಕಿ, ಮತಿಯುಲ್ಲಾ ಖಾನ್, ಮೊಹಮ್ಮದ್ ಫರೂಕ್, ಮೊಹಮ್ಮದ್ ಫರೂಕ್, ಮೊಹಮ್ಮದ್ ಫರೂಕ್, ಮೊಹಮ್ಮದ್ ಫರೂಕ್ (ವಿಕೆಟ್ ಕೀಪರ್), ರೋಹಿದ್ ಖಾನ್, ಸಿಮ್ರಂಜಿತ್ ಸಿಂಗ್, ಸಘೀರ್ ಖಾನ್.