ಜಡ್ಜ್‌ ಮುಂದೆ “ನನಗೆ ವಿಷ ನೀಡಲು ಆದೇಶಿಸಿ” ಎಂದು ಕಣ್ಣೀರಿಟ್ಟ ದರ್ಶನ್!!!

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಸಲ್ಲಿಕೆಯಾದ ಅರ್ಜಿ ಮತ್ತು ಹೆಚ್ಚುವರಿ ಹಾಸಿಗೆ ದಿಂಬು ನೀಡುವ ಕುರಿತ ಆದೇಶವನ್ನು ಕೋರ್ಟ್‌ ಕಾಯ್ದಿರಿಸಿದೆ.

ಇಂದು (ಸೆ.9) ಬೆಂಗಳೂರಿನ 57 ಸಿಸಿಹೆಚ್ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ಈ ವೇಳೆ ದರ್ಶನ್‌ ಅವರು ಜೈಲಿನ ಶಿಕ್ಷೆಯನ್ನು ಅನುಭವಿಸಲು ಆಗುತ್ತಿಲ್ಲ. ನನಗೆ ಸ್ವಲ್ಪ ವಿಷ ಕೊಡಿಸಿ ಜಡ್ಜ್‌ ಮುಂದೆ ಕಣ್ಣೀರಿಟ್ಟಿದ್ದಾರೆ. ಕೋರ್ಟ್‌ನಿಂದಲೇ ವಿಷ ನೀಡಲು ಆದೇಶಿಸಿ ಎಂದು ಆರೋಪಿ ದರ್ಶನ್‌ ನ್ಯಾಯಧೀಶರ ಮುಂದೆ ಕೈ ಎತ್ತಿ ಮನವಿ ಮಾಡಿದ್ದಾರೆ.

ಇದಕ್ಕೆ ಜಡ್ಜ್‌ ನೀವು ಹಾಗೆಲ್ಲ ಕೇಳುವಂತಿಲ್ಲ. ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ಅದನ್ನು ನೀಡುತ್ತೇವೆ. ನಿಮ್ಮ ಆದೇಶವನ್ನು ಮಧ್ಯಾಹ್ನ 3 ಗಂಟೆಗೆ ನೀಡುತ್ತೇವೆ ಎಂದು ಜಡ್ಜ್‌ ಹೇಳಿದ್ದಾರೆ.

error: Content is protected !!