ತುಳು ಚಿತ್ರ “ಪಿದಾಯಿ” ಸೆಪ್ಟೆಂಬರ್ 12ರಂದು ಕರಾವಳಿಯಾದ್ಯಂತ ತೆರೆಗೆ


ಮಂಗಳೂರು: ʻನಮ್ಮ ಕನಸು ಬ್ಯಾನರ್‌ ಅಡಿಯಲ್ಲಿ ನಿರ್ಮಿತ, ಕೆ. ಸುರೇಶ್ ನಿರ್ಮಾಣ ಮತ್ತು ರಮೇಶ್ ಶೆಟ್ಟಿಗಾರ್ ಕಥೆ, ರಾಷ್ಟ್ರಪ್ರಶಸ್ತಿ ವಿಜೇತ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ ತುಳು ಸಿನಿಮಾ ಪಿದಾಯಿ ಸೆಪ್ಟೆಂಬರ್ 12 ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆʼ ಎಂದು ನಟಿ ರೂಪಾ ವರ್ಕಾಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಚಿತ್ರವು ಕೊಲ್ಕತ್ತ, ಝಾರ್ಖಂಡ್ ಮತ್ತು ಕ್ಯಾಲಿಫೋರ್ನಿಯಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅಧಿಕೃತ ಆಯ್ಕೆಯಾಗಿದ್ದು, 16ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ತುಳು ಚಿತ್ರವು ಭಾರತೀಯ ಮತ್ತು ಕನ್ನಡ ವಿಭಾಗಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆʼ ಎಂದರು.

ಚಿತ್ರದ ಮುಖ್ಯಭೂಮಿಕೆಯಲ್ಲಿ ಖ್ಯಾತ ಕನ್ನಡ ನಟ ಶರತ್ ಲೋಹಿತಾಶ್ವ ನಟಿಸಿದ್ದಾರೆ. ಜೊತೆಗೆ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್..‌,, ರೂಪಶ್ರೀ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ಪ್ರೀತೇಶ್ ಕುಮಾರ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಡಿಬಿಸಿ ಶೇಖರ್, ಅನಿತಾ ಚಂದ್ರಶೇಖರ್ ಹಾಗೂ ಬಾಲ ಪ್ರತಿಭೆಗಳಾದ ಮೋನಿಶ್, ತಿಷ್, ಧ್ರುವ, ನಿಹಾ, ಕುಶಿ ಶೇಖರ್ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದ ಡಿಒಪಿ ರಾಷ್ಟ್ರಪ್ರಶಸ್ತಿ ವಿಜೇತ ಉಣ್ಣಿ ಮಾಡವೂರ್ ನಿರ್ವಹಿಸಿದ್ದಾರೆ. ಸಂಕಲನಕಾರರು ಸುರೇಶ್ ಅರಸ್; ಸಂಭಾಷಣೆ ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ ಶೇಖರ್. ಮುಡಿಪು ಮತ್ತು ಮಂಜೇಶ್ವರದಲ್ಲಿ ಚಿತ್ರೀಕರಣ ನಡೆದಿದೆ.
ಸಂಗೀತ: ಅಜಯ್ ನಂಬೂದಿರಿಯವರು.ಪ್ರಸಿದ್ಧ ಗಾಯಕ ಡಾ. ವಿದ್ಯಾಭೂಷಣ್, ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್, ಭಾವನಾ ಹಾಡಿದ್ದಾರೆ. ಹಿನ್ನಲೆ ಸಂಗೀತ: ದೀಪಾಂಕುರನ್. ಕಲಾ ನಿರ್ದೇಶಕ: ರಾಜೇಶ್ ಬಂದ್ಯೋಡು; ವಸ್ತ್ರ ವಿನ್ಯಾಸ: ಮೀರಾ ಸಂತೋಷ್; ಮುಖ್ಯ ಸಹ ನಿರ್ದೇಶಕರು: ವಿಶ್ಲೇಶ್ ಕುಲಾಲ್; ಸಹ ನಿರ್ದೇಶಕರು: ಗಿರೀಶ್ ಆಚಾರ್ ಸುಳ್ಯ, ಪುದೀಪ್ ರಾವ್, ವಿಶ್ವ ಮಂಗಲ್ಪಾಡಿ. ಚಿತ್ರದಲ್ಲಿ ತುಳುನಾಡಿನ ವಿಶೇಷ ಕುಣಿತ ಭಜನೆಗಳನ್ನು ಬಳಸಲಾಗಿದೆ, ಯೋಗೀಶ್ ಎ. ಯಸ್, ಅಡ್ವಕೇಟ್ ಶಶಿರಾಜ್ ಕಾವೂರ, ಶಿನೋಯ್ ಜೋಸೆಫ್ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ಮಹಿಳೆಯರ ಗೌರವದೊಂದಿಗೆ ಅವರ ಘನತೆಯನ್ನು ಎತ್ತಿಹಿಡಿಯುವ ಭೋಜಣ್ಣ ಪಾತ್ರವು ಕಥೆಯ ಜೀವಾಳವಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಸಂತೋಷ್‌ ಮಾಡ, ಪುಷ್ಪರಾಜ್‌ ಬೊಳ್ಳಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!